
ಶಿವಮೊಗ್ಗ :- ಶುಭ ಮಂಗಳ ಶ್ರೀ ಶನೈಶ್ಚರ ದೇವಸ್ಥಾನ ಪ್ರಧಾನ ಅರ್ಚಕರು , ಅರ್ಚಕ ವೃಂದ ಹಾಗೂ ಭಜನಾ ಪರಿಷತ್ ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಅಧ್ಯಕ್ಷರಾದ ವೇದ ಬ್ರಹ್ಮ ಶ್ರೀ ವಿನಾಯಕ ಬಾಯಾರಿ (47) ಅವರು ಇಂದು ಬೆಳಿಗ್ಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಪ ರಾಮಭಟ್ಟರ ಪರಮ ಶಿಷ್ಯರಾದ ಇವರು, ಅವರ ಎರಡನೇ ವರ್ಷದ ಪುಣ್ಯ ತಿಥಿಯಂದೆ ನಿಧನರಾಗಿದ್ದು ವಿಪರ್ಯಾಸ.
ಅವರ ಅಂತಿಮ ದರ್ಶನಕ್ಕೆ ಎಲ್ ಬಿಎಸ್ ನಗರ ಆಚ್೯ ಪಕ್ಕದ ಅವರ ನಿವಾಸದಲ್ಲಿ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿದೆ.
