ಶಿವಮೊಗ್ಗ :- ಆಕಾಶ್ ಎಜುಕೇಷನಲ್ ಸರ್ವಿಸಸ್ ಅವರ ವತಿಯಿಂದ ಇಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಕೆಸಿಇಟಿ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ಆಕಾಶ್ ಸಂಸ್ಥೆಯ ವೀರಭದ್ರೇಶ್ವರ ಕೋರಿ ಹೇಳಿದರು.
ಇಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂಜಿನಿಯರಿಂಗ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸುಲಭವಾಗಲಿ, ಉತ್ತಮ ತರಬೇತಿ ಉದ್ದೇಶದಿಂದ ಎಂಬ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯು ಕೆಸಿಇಟಿ ಮತ್ತು ಜೆಇಇ(ಮೇನ್) ಪ್ರವೇಶಕ್ಕಾಗಿ ಈ ಕೋರ್ಸ್‌ಗಳನ್ನು ಪಿಯುಸಿ ಪರೀಕ್ಷೆಗಳು ಮುಗಿದ ನಂತರ ಆರಂಭಿಸಲಾಗುತ್ತಿದೆ ಎಂದರು.
ಸುಮಾರು 3ಲಕ್ಷ ವಿದ್ಯಾರ್ಥಿಗಳು ಕೆಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಉತ್ತೀರ್ಣರಾದರೂ ಕೂಡ ಉತ್ತಮ ಕಾಲೇಜುಗಳು ಅವರಿಗೆ ದೊರಕುತ್ತಿಲ್ಲ. ಪ್ರಾದೇಶಿಕ ಇಂಜಿನಿಯರ್ ಪ್ರವೇಶ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ವಿಶ್ವ ಮಟ್ಟದ ತರಬೇತಿ ನೀಡುವ ಹಿನ್ನಲೆಯಲ್ಲಿ ನಮ್ಮ ಸಂಸ್ಥೆಯು ಕಳೆದ 3ವರ್ಷಗಳಿಂದ ತರಬೇತಿ ನೀಡುತ್ತಿದ್ದು, ನಮ್ಮ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
10ನೇ ತರಗತಿಯಿಂದ 11ನೇ ತರಗತಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ 10ನೇ ತರಗತಿ ಬೋರ್ಡ್ ಪರೀಕ್ಷೆಗಳು ಮುಗಿದ ನಂತರ ಮಾರ್ಚ್ 2025ರಿಂದ ಮೇ 2025ರ ನಡುವೆ ಹಾಗೂ ಫಲಿತಾಂಶ ಘೋಷಣೆಯಾದ ನಂತರ ಜೂನ್, ಜುಲೈ 2025ರಲ್ಲಿ ಕೆಸಿಇಟಿ ಮತ್ತು ಜೆಇಇ 2027 ಪ್ರವೇಶ ಪರೀಕ್ಷೆಗಳಿಗಾಗಿ ಎರಡು ವರ್ಷದ ಇಂಟಿಗ್ರೆಟೇಡ್ ತರಗತಿ ಕೋರ್ಸ್‌ಗಳನ್ನು ಆಕಾಶ್ ನಡೆಸುತ್ತಿದೆ ಎಂದರು.
12ನೇ ತರಗತಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಕೆಸಿಇಟಿ ಮತ್ತು ಜೆಇಇ 2026, ಸಿಬಿಎಸ್‌ಇ ಪ್ರವೇಶ ಪರೀಕ್ಷೆಗಳಿಗಾಗಿ ಒಂದು ವರ್ಷದ ಇಂಟಿಗ್ರೇಟೆಡ್ ತರಗತಿ ಕೋರ್ಸ್ ಮಾರ್ಚ್, ಏಪ್ರಿಲ್ -2025ರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾರಂಭವಾಗುತ್ತವೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಗಿರೀಶ್, ಅನಿಲ್ ಕುಮಾರ್ ಇದ್ದರು.
