google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸ್ವಾತ್ರಂತ್ರ ಹೋರಾಟದ ನೆಲೆ ಈಸೂರಿನಲ್ಲಿ ಜ. 29 ಮತ್ತು 30ರಂದು ಎರಡು ದಿನ ಕಾಲ ಕರ್ನಾಟಕ ಸರ್ವೋದಯ ಮಂಡಲ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಎಂ.ಎನ್. ಸುಂದರ ರಾಜ್ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನಕ್ಕೆ ವಿವಿಧ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಬರುವ ನಿರೀಕ್ಷೆಯಿದೆ. ಜ. 29 ರಂದು ಸಂಜೆ 5.30 ಕ್ಕೆ ಈಸೂರಿನ ಜಿ.ಎಸ್. ಶಿವರುದ್ರಪ್ಪ ಬಯಲು ರಂಗ ಮಂದಿರದಲ್ಲಿ ಸರ್ವೋದಯ ಮಂಡಲದ ಪ್ರತಿನಿಧಿಗಳ ಸಮ್ಮಿಲನ ಮತ್ತು ಶಿವಮೊಗ್ಗ ಸಹ್ಯಾದ್ರಿ ರಂಗತರಂಗದ ವತಿಯಿಂದ ಕಾಂತೇಶ ಕದರಮಂಡಲಗಿ ನಿರ್ದೇಶಿಸಿದ ‘ಮನುಜ ಮತ ಗಾಂಧಿ ಪಥ’ ನಾಟಕ ಏರ್ಪಡಿಸಲಾಗಿದೆ ಎಂದರು.

ಜ. 30ರಂದು ಬೆಳಿಗ್ಗೆ 9.30ಕ್ಕೆ ಇಲ್ಲಿನ ವೀರಭದ್ರ ಸ್ವಾಮಿ ದೇವಾಲಯದಿಂದ ಹುತಾತ್ಮರ ಸ್ಮಾರಕದವರೆಗೆ ಪ್ರಭಾತಪೇರಿ, 84 ಧ್ವಜಗಳೊಂದಿಗೆ ಜಥಾ ಮತ್ತು 11 ಗಂಟೆಗೆ ಮಹಾತ್ಮ ಗಾಂಧೀಜಿ ಮತ್ತು ಈಸೂರಿನ ಹುತಾತ್ಮರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ನಂತರ ನಡೆಯುವ ರಾಷ್ಟ್ರಮಟ್ಟದ ಸರ್ವೋದಯ ಮಂಡಲದ ಸಮಾವೇಶವನ್ನು ಈಸೂರು ಗ್ರಾ.ಪಂ. ಅಧ್ಯಕ್ಷೆ ರೇಖಾ ಪ್ರಭಾಕರ್ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ. ಸರ್ವೋದಯ ಮಂಡಲದ ರಾಷ್ಟ್ರೀಯ ಅಧ್ಯಕ್ಷ ಚಂದನ ವಾಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳು ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಾ. ಹೆಚ್.ಎಸ್.ಸುರೇಶ್ ವಿರಚಿತ ‘ಪಾತಕಲೋಕದಿಂದ ಗಾಂಧಿಯಾನದವರೆಗೆ’ ಕೃತಿ ಬಿಡುಗಡೆ ಮಾಡಲಾಗುವುದು. ಹಾಗೂ ಈಸೂರಿನ ಹುತಾತ್ಮ ಕುಟುಂಬದ ಸದಸ್ಯರಿಗೆ ಹಾಗೂ ಭಗವಂತರಾವ್, ಆರ್.ಬಸವರಾಜಪ್ಪ, ಗಾಯತ್ರಿ.ಬಿ.ರಾವ್, ಪ್ರೊ. ಸತ್ಯನಾರಾಯಣ, ಡಾ. ಡಿ.ವಿ. ರೇವಣಪ್ಪ ಗೌಡ, ಎಂ.ಎನ್.ವೆಂಕಟೇಶ್, ಆರ್.ಮನೋಹರ್ ಮತ್ತು ಪಿ.ಬಸವರಾಜಪ್ಪನವರನ್ನು ಸರ್ವೋದಯ ರಾಷ್ಟ್ರೀಯ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜಪ್ಪಪರಪ್ಪ ಕಂದಗಲ್, ಪ್ರಮುಖರಾದ ರಮೇಶ್, ಭಗವಂತ ರಾವ್, ವಿಶ್ವೇಶ್ವರಯ್ಯ, ಆರ್.ಬಸವರಾಜಪ್ಪ, ಸಾವಿತ್ರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *