
ಶಿವಮೊಗ್ಗ :- ಶಿವಮೊಗ್ಗ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ಜ.12ರಂದು ನಡೆಯಲಿದ್ದು, ಈ ಚುನಾವಣೆಗೆ ಎಂ. ಉಮಾಶಂಕರ ಉಪಾಧ್ಯ ಅವರ ನೇತೃತ್ವದಲ್ಲಿ 15 ಜನರ ತಂಡವನ್ನು ರಚಿಸಿಕೊಳ್ಳಲಾಗಿದೆ. ಈ ತಂಡವನ್ನೇ ಗೆಲ್ಲಿಸಬೇಕು ಎಂದು ಸ್ಪರ್ಧಿಸಿರುವ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ 15ಸ್ಥಾನಗಳಿದ್ದು, 3,063 ಮತದಾರರಿದ್ದಾರೆ. ಕಳೆದ ಅವಧಿಯಲ್ಲಿ ಆಡಳಿತದಲ್ಲಿದ್ದವರು ನಿವೇಶನ ಸೇರಿದಂತೆ ಸದಸ್ಯರಿಗೆ ಯಾವ ಅನುಕೂಲವನ್ನು ಮಾಡಲಿಲ್ಲ. ಆಡಳಿತ ಮಂಡಳಿಯಲ್ಲಿ ಸಂಪೂರ್ಣ ನಿಷ್ಕಿçÃಯವಾಗಿತ್ತು ಎಂದು ಆರೋಪಿಸಿದರು.
ಈ ಎಲ್ಲಾ ಹಿನ್ನಲೆಯಲ್ಲಿ ಸದಸ್ಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಮತ್ತು ನಿವೇಶನ ಹಾಗೂ ಮನೆ ನೀಡುವ ಉದ್ದೇಶದಿಂದ ನಾವು ಹೊಸ ತಂಡವನ್ನೇ ಕಟ್ಟಿಕೊಂಡಿದ್ದೇವೆ. ನಮ್ಮ ಹೊಸ ತಂಡ ಅಧಿಕಾರಕ್ಕೆ ಬಂದರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತೇವೆ. ನಮ್ಮನ್ನೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಮ್ಮ ತಂಡದಲ್ಲಿ ಎಸ್.ಡಿ. ಅನಂತ ರಾಮ ಸಿಂಗ್ ಎಂ. ಉಮಾಶಂಕರ ಉಪಾಧ್ಯ ಹೆಚ್. ತುಳಸೀರಾಮ ಪ್ರಸಾದ್, ಎಸ್.ಪಿ. ದಿನೇಶ್, ನರಸಿಂಹ ಗಂಧದಮನೆ, ಅ.ಮಾ. ಪ್ರಕಾಶ್, ಬಿ.ವಿ.ಭೀಮೇಶ್, ಎಲ್.ಕೆ. ಲಕ್ಷ್ಮೀ ನಾರಾಯಣ, ಕೆ.ಈ. ಸೋಮಶೇಖರ್, ಕೆ.ಜಿ. ಕುಮಾರಸ್ವಾಮಿ, ನಾಗರಾಜ್ ಬಿ.ಎಸ್., ಉಮೇಶ ಪುಟ್ಟಪ್ಪ, ಎಂ.ಆರ್.ಪ್ರಕಾಶ್, ಕವಿತಾ ಈ. ಶ್ರೀನಿವಾಸ್, ವೇದವತಿ ಕೆ.ಎಸ್. ಇವರುಗಳು ಸ್ಪರ್ಧಿಸಿದ್ದಾರೆ. ಜ.12ರ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕೋರ್ಟ್ ಮುಂಭಾಗದಲ್ಲಿರುವ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ ಎಂದರು.