ಶಿವಮೊಗ್ಗ :- ನಗರದ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನಿಂದ ನಡೆಸುತ್ತಿರುವ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಜ. 1ರಂದು ಹೊಸವರ್ಷ ಹಾಗೂ ಕಲ್ಪತರು ದಿನದ ಪ್ರಯುಕ್ತ ಜನ್ಮದಾತರಿಗೆ ಸಂಸ್ಥಾಪಕರಾದ ಡಿ.ಎಂ. ವೆಂಕಟರಮಣರವರ ಶ್ರೇಷ್ಠ ಚಿಂತನೆಯಂತೆ ಮಕ್ಕಳಿಂದ ಪಾದ ಪೂಜ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಶೋಭಾ ವೆಂಕಟರಮಣ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪಾದ ಪೂಜಾ ಕಾರ್ಯಕ್ರಮ ಕಳೆದ 16ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಪ್ರತಿ ವರ್ಷವೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳ ಹಾಗೂ ಪೋಷಕರ ಸಂಭ್ರಮ ವರ್ಣಾನಾತೀತವಾಗಿರುತ್ತದೆ ಎಂದರು.
ಈ ಕಾರ್ಯಕ್ರಮವು ತಂದೆ, ತಾಯಿ ಹಾಗೂ ಮಕ್ಕಳ ಭಾವನ್ಮಾತಕ ಬೆಸುಗೆಗೆ ಕಾರಣಿಭೂತವಾಗಿದೆ. ಈ ವರ್ಷ ವಸತಿ ಶಾಲೆಯ 830 ಮಕ್ಕಳು ಈ ಪುಣ್ಯ ಕಾರ್ಯಕ್ರಮದಲ್ಲಿ ತಮ್ಮ ಪೋಷಕರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ. ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಮತ್ತು ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಗಳು ಮಕ್ಕಳಲ್ಲಿ ಒಂದು ಸಂಸ್ಕಾರಯುತ, ಮಲ್ಯವರ್ದಿತ ಉತ್ಕಷ್ಟ ಶಿಕ್ಷಣ ನೀಡುವಲ್ಲಿ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ. ಮಕ್ಕಳ ಸವಾಂಗೀಣ ಬೆಳವಣಿಗೆಗೆ ಕಾರಣವಾಗುವ ಕ್ರೀಡಾಕ್ಷೇತ್ರ, ವಿಜನಕ್ಷೇತ್ರ, ಆಧ್ಯಾತ್ಮಿಕಕ್ಷೇತ್ರ ಹಾಗೂ ಶೈಕ್ಷಣಿಕ ರಂಗದಲ್ಲಿ ಅತಿ ಹೆಚ್ಚಿನ ಸಾಧನೆಯನ್ನು ವರ್ಷದಿಂದ ವರ್ಷಕ್ಕೆ ಮಾಡುತ್ತಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಈಗಾಗಲೇ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದಿರುತ್ತಾರೆ. ಪ್ರಸಕ್ತ ಈ ಸಾಲಿನಲ್ಲಿ ಅನೇಕ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಚಿನ್ಮಯ್ ಎಂ ಗೌಡ ಗುಜರಾತ್‌ನಲ್ಲಿ ನಡೆದ ಈಜು ಸಯಲ್ಲಿ ಭಾಗವಹಿಸಿರುತ್ತಾರೆ. ವಿಲಾಸ್ ಅಂದ್ರಡೆ ಭೂಪಾಲ್‌ನಲ್ಲಿ ನಡೆದ ಚೆಸ್‌ನಲ್ಲಿ, ವೇದಾ ಕೆ ಯು.ಪಿ.ಯಲ್ಲಿ ನಡೆದ ಹ್ಯಾಮರ್ ಥ್ರೋ ನಲ್ಲಿ, ಇದಲ್ಲದೆ ವಿಜನ ಕ್ಷೇತ್ರದಲ್ಲಿ, ಪಾಂಡಿಚೆರಿಯಲ್ಲಿ ಜ. 20ರಿಂದ 25ರವರೆಗೆ ನಡೆಯುವ ವಿಜನ ವಸ್ತು ಪ್ರದರ್ಶನದಲ್ಲಿ ದಕ್ಷಿಣಭಾರತ ವಲಯಮಟ್ಟಕ್ಕೆ ನಮ್ಮ ಶಾಲೆಯ ಪ್ರೀತಮ್ ಎಸ್.ಎಂ. ಹಾಗೂ ಚಿರಂತನ್ ಟಿ.ಎಸ್. ಆಯ್ಕೆಯಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ಗರಿಮೆ ಹೆಚ್ಚಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ. ಡಿ. ಆರ್. ನಾಗೇಶ್ ಮಾತನಾಡಿ, ಸಂಸ್ಥೆಯ ಈ ಬೆಳವಣಿಗೆಗೆ ಮಾತೃ ಹೃದಯದ ಶಿಕ್ಷಕ ವೃಂದ, ದಕ್ಷ ಆಡಳಿತ ಮಂಡಳಿ ಹಾಗೂ ಸದಾ ಸಂಸ್ಥೆಗೆ ಸಹಕಾರ ನೀಡುತ್ತಿರುವ ಪೋಷಕ ವೃಂದ ಹಾಗೂ ಗುಣಾತ್ಮಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿವೃಂದ ಕಾರಣವಾಗಿರುತ್ತದೆ. ತಂದೆ ತಾಯಿಗಳಿಗೆ ಗೌರವ ಮತ್ತು ಪ್ರೀತಿ ತೋರಿಸುವುದನ್ನು ಮಕ್ಕಳು ಬಾಲ್ಯದಲ್ಲಿಯೇ ಕಲಿಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಾವು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಜ. 1ರಂದು ನಡೆಯುವ ಜನ್ಮದಾತರಿಗೆ ಪಾದ ಪೂಜೆ ಕಾರ್ಯಕ್ರಮದಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಟ್ಟಾದ್ಯಕ್ಷರು, ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ ಇವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಅತಿಥಿಗಳಾಗಿ ಚಿಂತಕ, ವಾಗ್ಮೀ ಜಿ.ಎಸ್. ನಟೇಶ್ ರವರು ತಂದೆ, ತಾಯಿ ಮತ್ತು ಮಗುವಿನ ಸಂಬಂಧದ ಬಗ್ಗೆ ಮಾತನಾಡಲಿದ್ದಾರೆ. ರಾಮಕೃಷ್ಣ ಶಾಲೆಯ ಸಾಧಕ ವಿದ್ಯಾರ್ಥಿ ಸರ್ಜಿ ಆಸ್ಪತ್ರೆಯ ವೈದ್ಯ ಡಾ. ಸುಮನ್ ಪಟೇಲ್ ಬಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಡಿ.ಆರ್. ನಾಗೇಶ್ ವಹಿಸಲಿದ್ದಾರೆ. ಸಂಸ್ಥೆಯ ಸದಸ್ಯ ಡಿ.ಎಂ. ದೇವರಾಜ್, ಕಾರ್ಯದರ್ಶಿ ಶೋಭಾ ವೆಂಕಟರಮಣ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಕೋ ಆರ್ಡಿನೇಟರ್ ಆದ ಕೆ.ಹೆಚ್. ಅರುಣ್, ಶರತ್, ಮುಖ್ಯಶಿಕ್ಷಕರಾದ ತೀರ್ಥೇಶ್, ಹೆಚ್.ಎಂ. ವೆಂಕಟೇಶ್ ಇದ್ದರು.