
ಶಿವಮೊಗ್ಗ :- ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ. ಇಂದು ನಮ್ಮ ಪೊಲೀಸ್ ಸಿಬ್ಬಂದಿ ವರ್ಗದವರು ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ವೃತ್ತಿಯ ಜೊತೆ ಜೊತೆ ರಕ್ತದಾನ ಮಾಡುವುದೂ ಕುಡ ಆರೋಗ್ಯ ದೃಷ್ಠಿಯಲ್ಲಿ ಒಳ್ಳೆಯದು ಎಂದು ವಿನೋಬನಗರ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಕಲಾ ಕರೆ ನೀಡಿದರು.
ವಿನೊಬನಗರದ ಪೊಲೀಸ್ ಠಾಣೆಯಲ್ಲಿ ಸ್ವಯಂ ಸೇವಾ ರಕ್ತದಾನಿ ಗಳ ಸೇವಾ ಸಂಸ್ಥೆ ಸಹಯೋಗದಲ್ಲಿ ಪೊಲೀಸ್ ಸಿಬ್ಬಂಧಿಯವರು ಹಾಗೂ ಸಾರ್ವಜನಿಕರಿಗಾಗಿ ಇಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರಕ್ತದಾನಿ ಗಳು ನಿಜವಾದ ಸಮಾಜ ಸೇವಕರು. ಇಂದು ರಕ್ತದ ಕೊರತೆ ತುಂಬಾ ಇದೆ, ನಾವು ಪ್ರತಿನಿತ್ಯ ಗಮನಿಸುತ್ತಾ ಇರುತ್ತೇವೆ, ರಕ್ತ ಸಿಗದೆ ಅನೇಕ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಕ್ತ ಬೇಕಾದಾಗ ಮಾತ್ರ ಅದರ ಬೆಲೆ ಏನೆಂದು ತಿಳಿಯುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ವೈದ್ಯರ ಸಲಹೆ ಮೇರೆಗೆ ೩ತಿಂಗಳಿಗೊಂದು ಬಾರಿ ರಕ್ತದಾನ ಮಾಡಿ. ಈ ಮೂಲಕ ಮುಖಾಂತರ ತಮ್ಮ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ೪೮ಬಾರಿ ಭಾರಿ ರಕ್ತದಾನ ಮಾಡಿದ ಹೆಡ್ ಕಾನ್ಸ್‌ಟೆ ಬಲ್ ಹಾಲೇಶಪ್ಪ ಅವರು ಮಾತನಾಡಿ, ಪೊಲೀಸ್ ಠಾಣೆಗಳಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಾವು ಜಿಲ್ಲಾದ್ಯಂತ ಪೋಲಿಸ್ ಅಧೀಕ್ಷಕರ ಅನುಮತಿ ಮೇರೆಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ರಕ್ತದಾನದಿಂದ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವ ಯಾವುದಾದರೂ ಆರೋಗ್ಯ ಸಮಸ್ಯೆ ಕೂಡಲೇ ತಿಳಿಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸಬೇಕು ಎಂದು ಹೇಳಿದರು
ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ ವಿಜಯ ಕುಮಾರ್ ಅವರು ಮಾತನಾಡಿ, ರಕ್ತದಾನದಿಂದ ದೇಹ ಸದಾ ಲವಲವಿಕೆಯಿಂದ ಇರುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಹೊಸ ರಕ್ತ ಉತ್ಪತ್ತಿಯಾಗಿ ಸದಾ ಲವಲವಿಕೆಯಿಂದ ಆರೋಗ್ಯವಂತ ರಾಗಿರಬಹುದು ಎಂದರು.
ಶಿಬಿರದಲ್ಲಿ ೧೧೬ ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್, ೬೦ಬಾರಿ ರಕ್ತದಾನ ೨೭೦ಬಾರಿ ಪ್ಲೇಟ್ಲೆಟ್ಸ್ ಗಳನ್ನ ದಾನ ಮಾಡಿದ ಚಂದ್ರಕಾಂತ್ ಆಚಾರ್ಯ, ರೆಡ್ ಕ್ರಾಸ್ ನಿರ್ದೇಶಕ ಮಂಜು ಅಪ್ಪಾಜಿ. ರೆಡ್‌ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ ವಿನೋಬಾ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ರಕ್ತದಾನ ಮಾಡಿದರು.