
ಶಿವಮೊಗ್ಗ :- ಇತ್ತೀಚೆಗಷ್ಟೆ ಶೆಟ್ಟಹಳ್ಳಿ ಅಭಯಾರಣ್ಯ ಸುತ್ತಮುತ್ತಲ ಗ್ರಾಮಗಳ ರೈತರ ತೋಟ ಗದ್ದೆಗಳಿಗೆ ದಾಳಿ ನಡೆಸಿದ ಆನೆಗಳು ಸಾಕಷ್ಟು ಬೆಳೆ ಹಾನಿ ಮಾಡಿರುವ ಬೆನ್ನಲ್ಲೇ ನಿನ್ನೆ ರಾತ್ರಿ ಚೋರಡಿ ಸಮೀಪದ ತುಪ್ಪೂರು ಗ್ರಾಮದ ತೋಟಗಳಿಗೆ ದಾಳಿ ಮಾಡಿವೆ.
ತುಪ್ಪೂರು ಗ್ರಾಮದ ಲೋಕೇಶ್ ಎಂಬುವರ ತೋಟದಲ್ಲಿ ಸಾಕಷ್ಟು ಬಾಳೆ ಗಿಡಗಳನ್ನು ಕಿತ್ತು ಹಾಕಿವೆ ಹಾಗೂ ಕಟಾವು ಮಾಡಿದ್ದ ಮುಸುಕಿನ ಜೋಳದ ರಾಶಿ ಬಳಿ ಬಂದು ಸಾಕಷ್ಟು ತಿಂದು ಅಲ್ಲಿದ್ದ ಬಲವಾದ ಹಾರೆ ಕೋಲನ್ನು ಬಗ್ಗಿಸಿ ನಂತರ ಸಮೀಪದ ಮುಸುಕಿನ ಜೋಳದ ಗದ್ದೆ ಮೂಲಕ ಕಾಡಿನೊಳಗೆ ನಾಪತ್ತೆಯಾಗಿವೆ.
ಈ ಭಾಗದಲ್ಲಿ ಚಿರತೆ, ಆನೆ ಹಾವಳಿ ಹೆಚ್ಚಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವಾರು ಭಾರಿ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ ಆದರೂ ಸರಿಯಾದ ಕ್ರಮ ಕೈಗೊಂಡಿಲ್ಲ. ಮುಂದೆ ಆನೆಗಳಿಂದ ಭಾರಿ ಅನಾವುತ ಸಂಭವಿಸುವ ಮುನ್ನು ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.