
ಶಿವಮೊಗ್ಗ :- ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಚಾಲಕರ ಕಾರ್ಮಿಕರ ಘಟಕದ ವತಿಯಿಂದ ಡಿ. 5 ಮತ್ತು ಡಿ. 6ರಂದು ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ದುರ್ಗಿಗುಡಿ 2ನೇ ತಿರುವಿನಲ್ಲಿರುವ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಚಾಲಕರಿಗೆ ಉಚಿತವಾಗಿ ಚಾಲಕರ ಲೇಬರ್ ಕಾರ್ಡ್ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಹಾಗೂ ರಾಜಧ್ಯಕ್ಷ ಸತೀಶ್ ಹೆಚ್.(ದೇವು) ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಚಾಲಕರಿಗೆ ಲೇಬರ್ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಚಾಲಕರು ಒಟ್ಟುಗೂಡಿ ಚಾಲಕ ಕಾರ್ಮಿಕರ ಘಟಕವನ್ನು ಸ್ಥಾಪನೆ ಮಾಡಿದ್ದಾರೆ ಎಂದರು.
ಉಚಿತ ಚಾಲಕರ ಲೇಬರ್ ಕಾರ್ಡ್ಗಾಗಿ ಚಾಲಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್ಪೋರ್ಟ್ ಸೈಜಿನ ಪೋಟೋಗಳನ್ನು ತರಬೇಕಾಗಿದೆ ಎಂದರು.
ಚಾಲಕರು, ನಿರ್ವಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿಗಳು, ಬುಕ್ಕಿಂಗ್ ಗುಮಾಸ್ತ, ಡಿಪೋ ಗುಮಾಸ್ತ, ಮೋಟಾರ್ ಗ್ಯಾರೇಜ್ ಸಿಬ್ಬಂದಿ, ನಿಲ್ದಾಣ ಲೋಡಿಂಗ್/ಅನ್ ಲೋಡಿಂಗ್ ಸಿಬ್ಬಂದಿ, ಟೈರ್ ಜೋಡಿಸುವ ಅಥವ ಬೇರ್ಪಡಿಸುವ ಸಿಬ್ಬಂದಿ ಸೇರಿದಂತೆ ಇನ್ನಿತರರು ಈ ಕಾರ್ಡ್ನ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಅರ್ಹರಿಗೆ ಮಾತ್ರ ಕಾರ್ಡ್ನ್ನು ವಿತರಿಸಲಾಗುತ್ತಿದ್ದು, ಎಲ್ಲಾ ದಾಖಲೆಗಳು ಇದ್ದರೆ ಮಾತ್ರ ಇದರ ಪ್ರಯೋಜನ ಪಡೆಯಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂತೋಷ್, ಸತೀಶ್ ಬಿ.ಕೆ., ಜಿ.ಉಮೇಶ್, ರಾಜು ಇನ್ನಿತರರು ಉಪಸ್ಥಿತರಿದ್ದರು.