
ಶಿವಮೊಗ್ಗ; ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕ್ರಾಂಗ್ರೆಸ್ ಮುಖಂಡ ಹಾಗೂ ಕೊಡುಗೈ ದಾನಿ ಎಂ. ಶ್ರೀಕಾಂತ್ ಸಾರಥ್ಯದ ಸದ್ಬಾವನ ಎಜುಕೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್ ವತಿಯಿಂದ ಇಂದು ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸುವ ಮೂಲಕ ಬಾಗಿನ ನೀಡಿ, ಗೌರವಿಸಲಾಯಿತು.
ನಗರದ ವೀರಶೈವ ಕಲ್ಯಾಣಮಂದಿರದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ನೂರಾರು ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಹಲವು ಮಂದಿ ಗಣ್ಯರು ಹಾಜರಿದ್ದು, ಸೀರೆ ವಿತರಿಸುವ ಮೂಲಕ ಗೌರವಿಸಿದರು.

ವೇದಿಕೆಯಲ್ಲಿ ಬಾಗಿನ ಸ್ವೀಕರಿಸಿ ಮಹಿಳಾ ಪೌರ ಕಾರ್ಮಿಕರು ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಅವರ ಸಾಮಾಜಿಕ ಸೇವಾ ಕಾರ್ಯಕ್ಕೆ ಪ್ರತಿಕ್ರಿಯಿಸಿ, ಸೀರೆ ಕೊಟ್ಟು ಬಾಗಿನ ನೀಡುವ ಮೂಲಕ ನಮ್ಮನ್ನು ಸಹೋದರಿಯರಂತೆ ಕಾಣುವ ಶ್ರೀಕಾಂತ್ ಅಣ್ಣನವರ ಮನಸು ದೊಡ್ಡ ಮನಸು. ಇಂತಹದೊಂದು ಪುಣ್ಯದ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಾ ಬಂದಿರುವುದು ನಮಗೆಲ್ಲಾ ಅತೀವ ಸಂತಸ ತಂದಿದೆ. ಅವರ ಮೇಲೆ ಅಭಿಮಾನ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಮುಕ್ತ ಕಂಠದಿಂದ ಬಣ್ಣಿಸಿದರು.
ಆಧಿಕಾರ ಇರಲಿ, ಇಲ್ಲದಿರಲಿ ಶ್ರೀಕಾಂತ್ ಅಣ್ಣನವರು ಕಳೆದ ಮೂರು ವರ್ಷಗಳಿಂದ ನಮಗೆಲ್ಲ. ಸೀರೆ ಕೊಟ್ಟು ಬಾಗಿನ ನೀಡುವ ಕೆಲಸಾಮಾಡುತ್ತಾ ಬಂದಿದ್ದಾರೆ. ಅವರ ಗೌರವಕ್ಕೆ ನಾವು ಚಿರ ಋಣಿಯಾಗಿದ್ದೇವೆ. ಬರುವ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ದೊಡ್ಡ ಶಕ್ತಿ ಸಿಗಲಿ, ಅಧಿಕಾರದಲ್ಲಿದ್ದಾಗ ಅವರು ಇನ್ನಷ್ಟು ಸಂತಸದಿಂದ ಬಾಗಿನ ನೀಡಲಿ. ಆದಷ್ಟು ಬೇಗ ದೇವರು ಅವರಿಗೆ ಅಂತಹ ಶಕ್ತಿ ನೀಡಲಿ ಎಂದು ಮಹಿಳಾ ಪೌರಕಾರ್ಮಿಕರ ಪರವಾಗಿ ನೇತ್ರಾವತಿ, ಗಂಗಮ್ಮ ಹಾರೈಸಿದರು.
ವೇದಿಕೆಯಲ್ಲಿ ಐದು ಮಂದಿ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗೆ ಸೀತೆ ವಿತರಿಸಿದ ಬಳಿಕ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ, ಪ್ರತಿ ವರ್ಷ ಗೌರಿ ಹಬ್ಬದ ವೇಳೆಯೇ ನಾವು ಪಾಲಿಕೆಯ ಮಹಿಳಾಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಗುತ್ತಿತ್ತು. ಈ ಬಾರಿ ಸ್ವಲ್ಪ ತಡವಾಯಿತು. ನವರಾತ್ರಿ ವೇಳೆಯೇ ಕೊಡೋಣ ಅಂತ ನಾವೇ ನಿರ್ಧಾರ ಮಾಡಿಕೊಂಡಿದ್ದರ ತಡವಾಯಿತು ಎಂದು ಸ್ಪಷ್ಟನೆ ನೀಡಿದರಲ್ಲದೆ, ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕಿದೆ. ಯಾಕೆಂದರೆ ನಗರವನ್ನು ಸ್ವಚ್ಚವಾಗಿಡುವ ಅವರ ಕೆಲಸದಿಂದಲೇ ಜನಪ್ರತಿನಿಧಿಗಳಿಗೂ ಗೌರವ ಸಿಗುತ್ತದೆ. ಹಾಗಾಗಿ ಅವರನ್ನು ಗೌರವಿಸುವ ಕೆಲಸ ಎಲ್ಲರಿಂದಲೂ ಆಗಬೇಕೆಂದು ಹೇಳಿದರು.
ಕಳೆದ 25 ವರ್ಷಗಳಿಂದ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ ನೊಂದವರ ಪರವಾಗಿರಬೇಕೆನ್ನುವುದು ನನ್ನ ಸಿದ್ದಾಂತ .ಅದರ ಭಾಗವಾಗಿಯೇ ಈ ಕೆಲಸ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದ ಅವರು, ಪೌರ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕಿದೆ. ಇವತ್ತಿನ ಕಾಯಿಲೆಗಳು ಸಾಕಷ್ಟ ಸವಾಲಾಗಿವೆ. ಸಣ್ಣ ಜ್ವರವೂ ಕೂಡ ಸಣ್ಣ ಪುಟ್ಟ ಚಿಕಿತ್ಸೆಗೆ ಹೋಗುತ್ತಿಲ್ಲ. ಜ್ವರ ಬಂದರೂ ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಬೇಕಿದೆ. ಇಂತಹ ಸವಾಲಿನ ನಡುವೆಯೂ ನೀವು ನಗರವನ್ನು ಸ್ವಚ್ಚವಾಗಿಡಲು ನಿತ್ಯವೂ ಕಷ್ಟಪಡುವ ರೀತಿಗೆ ವಿಶೇಷ ಗೌರವ ನೀಡಬೇಕಿದೆ. ನಿಮ್ಮಮಕ್ಕಳಿಗೆ ನೀವು ಉತ್ತಮ ಶಿಕ್ಷಣ ಕೊಡಿಸಬೇಕಿದೆ. ನಿಮ್ಮ ಮಕ್ಕಳು ಉನ್ನತ ಉದ್ಯೋಗಕ್ಕೆ ಹೋಗಬೇಕು ಎಂದರು.
ವೀರ ಶೈವ ಸಮಾಜದ ಮುಖಂಡ ಮಹೇಶ್ವರಪ್ಪ ಮಾತನಾಡಿ, ಮುಖಂಡರಾದ ಶ್ರೀಕಾಂತ್ ಅವರಿಗೆ ಬಡವರು ಕಂಡರೆ ತುಂಬಾ ಅನುಕಂಪ. ನಾನು ನೋಡಿದಂತೆ ಅವರು ಸಾಮಾಜಿಕ ಸೇವೆ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿದೆ. ಈಗ ಪಾಲಿಕೆ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ಕೊಡುವ ಕೆಲಸಮಾಡುತ್ತಾ ಬಂದಿದ್ದಾರೆ. ಅಧಿಕಾರ ಇರಲಿ, ಇಲ್ಲದಿರಲಿ ಅವರು ಸಾಮಾಜಿಕ ಸೇವೆಯನ್ನು ಎಂದಿಗೂ ಮರೆತಿಲ್ಲ, ಅವರಿಗೆ ರಾಜಕೀಯವಾಗಿ ಒಳ್ಳೆಯದಾಗಲಿ ಎಂದರು.
ಪಾಲಿಕೆ ಪೌರ ಕಾರ್ಮಿಕರ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದಣ್ಣ ಮಾತನಾಡಿ, ಶ್ರೀಕಾಂತ್ ಅವರ ಕಾರ್ಯ ಮೆಚ್ಚಲೇ ಬೇಕಿದೆ. ಅಧಿಕಾರ ಇರಲಿ, ಇಲ್ಲದಿರಲಿ ಅವರು ಪಾಲಿಕೆ ಮಹಿಳಾ ಪೌರ ಕಾರ್ಮಿಕರಿಗೆ ಪ್ರತಿ ವರ್ಷ ಸೀರೆ ವಿತರಿಸುತ್ತಾ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಅಧಿಕಾರಸ್ಥರಾಗಿ ಜನ ಸೇವೆಗೆ ಇನ್ನಷ್ಟು ತೆರೆದುಕೊಳ್ಳುವಂತಾಗಲಿ ಎನ್ನುವುದು ನಮ್ಮ ಆಸೆ ಎಂದರು.
ವೇದಿಕೆಯಲ್ಲಿ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯೆ ನಿರ್ಮಲ ಕಾಶಿ, ಪಾಲಿಕೆಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಪಾಲಿಕೆ ಮಾಜಿ ಸದಸ್ಯೆ ಗಾಡಿಕೊಪ್ಪ ರಾಜಣ್ಣ, ಪೌರ ಕಾರ್ಮಿಕರ ಸಂಘದ ಮುಖಂಡರಾದ ಪ್ರಕಾಶ್, ಕುಮಾರ್, ಮಂಜುನಾಥ್ ,ಪಾಲಿಕೆ ಆರೋಗ್ಯಾಧಿಕಾರಿ ವೇಣುಗೋಪಾಲ್ ಸೇರಿ ಹಲವರು ಇದ್ದರು.