google.com, pub-9939191130407836, DIRECT, f08c47fec0942fa0

ಸಾಗರ :- ಸಾಗರ ಮಾರಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ. ಜತ್ರೆ ಸಂದರ್ಭದಲ್ಲಿ ಸಾಂಸ್ಕತಿಕ ಉತ್ಸವಗಳು ಊರಿನ ಕಲಾಪರಂಪರೆ ಬಿಂಬಿಸಲು ಸಹಕಾರಿಯಾಗಿರುತ್ತದೆ ಅದರಲ್ಲೂ ಚಲನಚಿತ್ರ ನಟ ಡಾ. ಶಿವರಾಜ ಕುಮಾರ್ ಸಾಗರಕ್ಕೆ ಬರುವುದು ಎಂದರೆ ಒಂದು ರೀತಿಯ ಹೆಮ್ಮೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ನಗರಸಭೆ ಆವರಣದ ನಗರಸಭೆ ರಂಗಮಂದಿರದಲ್ಲಿ ಗುರುವಾರ ಮಾರಿಕಾಂಬಾ ನ್ಯಾಸ ಪ್ರತಿಷ್ಟಾನದ ವತಿಯಿಂದ ಮಾರಿಕಾಂಬಾ ಜತ್ರೆ ಹಿನ್ನೆಲೆಯಲ್ಲಿ ಎಂಟು ದಿನಗಳ ಸಾಂಸ್ಕತಿಕ ವೈಭವ ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ. ಜತ್ರೆ ಸಂದರ್ಭದಲ್ಲಿ ಸಣ್ಣಪುಟ್ಟ ದೂರುಗಳು ಇರಬಹುದು. ನಮ್ಮೂರಿನ ಜನರಿಗೆ ಅಮ್ಮನವರ ದರ್ಶನ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಒಂದಷ್ಟು ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಂಡಿದೆ. ಯಾವುದೇ ಸಮಸ್ಯೆ ಆಗದೆ ಅಮ್ಮನವರ ದರ್ಶನ ಜನರು ಪಡೆದಿದ್ದಾರೆ. ಸುಮಾರು ೧೦ಗಂಟೆ ನಿಂತು ಅಮ್ಮನವರ ದರ್ಶನಕ್ಕೆ ನೂಕುನುಗ್ಗಲು ಮಾಡಿಕೊಳ್ಳದಂತೆ iನವಿ ಮಾಡಿದ್ದೇನೆ. ಅದೇ ರೀತಿ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಗೀತಾ ಶಿವರಾಜ ಕುಮಾರ್, ಹುಲಿ ಕಾರ್ತಿಕ್, ಭರತ್ ಸಾಗರ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್‌ಪಿ ಡಾ. ಬೆನಕ ಪ್ರಸಾದ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್,ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟಾ, ಪ್ರಮುಖರಾದ ಪುರುಷೋತ್ತಮ, ರಾಮು, ಲೋಕೇಶ್ ಕುಮಾರ್, ಗಂಗಾಧರ ಜಂಬಿಗೆ, ಪುರುಷೋತ್ತಮ ಇನ್ನಿತರರಿದ್ದರು.

Leave a Reply

Your email address will not be published. Required fields are marked *