ಶಿವಮೊಗ್ಗ :- ನಗರದ ಕುವೆಂಪು ರಸ್ತೆಯಲ್ಲಿರುವ ವಾಸನ್ ಐ ಕೇರ್ ಆಸ್ಪತ್ರೆಯ ವತಿಯಿಂದ ಡಿ. 17, 18, 19 ರಂದು ಕಣ್ಣಿನಪೊರೆ ಜಗೃತಿಗಾಗಿ ಕ್ಯಾಟರಾಕ್ಟ್ ಬ್ಲೂ ಡೇ ಹಾಗೂ ಮಧುಮೇಹ ಹೊಂದಿರುವವರಲ್ಲಿ ಪ್ರಮುಖವಾಗಿ ಕಂಡುಬರುವ ರೆಟಿನಾ ಸಮಸ್ಯೆ ಜಗೃತಿಗೆ ರೆಟಿನಾ ಲಿಂಕ್ ಡೇ ಎಂಬ ಈ ಎರಡು ಜಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಪ್ರಸನ್ನಕುಮಾರ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಪ್ರಯುಕ್ತ ಸುಮಾರು ೫೦೦೦ ರೂ. ಮಲ್ಯದ ಪೂರ್ವ ಶಸ್ತ್ರ ಚಿಕಿತ್ಸೆ ತಪಾಸಣೆಗಳು ಸಂಪೂರ್ಣ ಉಚಿತ. ಕನ್ನಡಕಗಳ ಮೇಲೆ 10% ರಿಯಾಯಿತಿ ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 18 ಶಾಖೆಗಳನ್ನು ಕಾರ್ಯನಿರ್ವಹಿಸುತ್ತಿದ್ದು ಶಿವಮೊಗ್ಗ ಶಾಖೆಯು ಕಳೆದ 14 ವರ್ಷಗಳಿಂದ ಜಿಲ್ಲೆಯಲ್ಲಿ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಆಸ್ಪತ್ರೆಯಲ್ಲಿ ಫೇಕೋಯಂತ್ರ ಮತ್ತು ಅತ್ಯಾಧುನಿಕ ಮೈಕ್ರೋ ಸ್ಕೋಪ್‌ಗಳನ್ನು ಬಳಸಿ ಕಣ್ಣಿನ ಪೊರೆ ಹಾಗೂ ರೆಟಿನಾ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಆಸಕ್ತರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದರು. ಪತ್ರಿಕಾಗೋಷ್ಟಿಯಲ್ಲಿ ಡಾ. ಗುಣಶ್ರೀ, ಡಾ. ಹೆಚ್.ಜಿ. ರಶ್ಮಿ ಹಾಗೂ ನರಸಿಂಹಮೂರ್ತಿ ಇದ್ದರು.