ಶಿವಮೊಗ್ಗ :- ಸಂಸ್ಕಾರ ಪ್ರತಿಷ್ಠಾನದ ವತಿಯಿಂದ ಸೆ. 30ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಸ್ಕಾರ ಪ್ರತಿಷ್ಠಾನದ ಸಹಾಯಾರ್ಥ ಖ್ಯಾತ ಗಾಯಕಿ ಸೂರ್ಯಗಾಯಿತ್ರಿ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಶಿವಮೊಗ್ಗ ವಿನಯ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸೂರ್ಯ ಗಾಯಿತ್ರಿ ಅವರು ಕೇರಳ ಮೂಲದ ಗಾಯಕಿ. ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ eನ ಬೆಳೆಸಿಕೊಂಡವರು. ಸಾಮಾಜಿಕ ಜಲತಾಣವಾದ ಯೂಟ್ಯೂಬ್ ನಲ್ಲಿ ಹಾಡಿ ಕೋಟ್ಯಂತರ ವೀಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಸಂಗೀತ ಲೋಕದ ಮಿನುಗುತ್ತಿರುವ ನಕ್ಷತ್ರ ಎಂದರು.
10ನೇ ವಯಸ್ಸಿನಲ್ಲಿಯೇ ಸಂಗೀತ ಅಭ್ಯಾಸ ಮಾಡಿರುವ ಅವರು ಈಗಾಗಲೇ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 500ಕ್ಕೂ ಹೆಚ್ಚು ಸಾರ್ವಜನಿಕ ಸಮಾರಂಭಗಳಲ್ಲಿ ಹಾಡಿದ್ದಾರೆ. ಅಯೋಧ್ಯೆಯ ಶ್ರೀ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ರಾಮಭಜನೆ ಹಾಡಿ ಪ್ರಧಾನಿ ಮೋದಿ ಅವರಿಂದ ಸೈ ಎನಿಸಿಕೊಂಡಿದ್ದಾರೆ. ಇಂತಹ ಖ್ಯಾತ ಗಾಯಕಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಸ್ಕಾರ ಪ್ರತಿಷ್ಠಾನವು ಭಾರತೀಯ ಸಂಸ್ಕಾರಗಳನ್ನು ಪರಿಚಯಿಸುವ ಪ್ರತಿಷ್ಠಾನವಾಗಿದೆ. ಸದ್ಗುರು ಪ್ರಾರ್ಥನಾ ಮಂದಿರ ಪ್ರಾರಂಭಿಸುವುದು, ಮಕ್ಕಳಿಗೆ ಭಜನೆ, ಧ್ಯಾನ ನೀತಿ ಕಥೆ ಇತ್ಯಾದಿಗಳನ್ನು ಕಲಿಸುವುದು, ಆಧ್ಯಾತ್ಮಿಕ ಚಿಂತನೆಗಳನ್ನು ಪಸರಿಸುವುದು, ಸಾಮಾಜಿಕ ಸಾಮರಸ್ಯ ಕುರಿತು ಕಾರ್ಯಾಗಾರ ಏರ್ಪಡಿಸುವುದು, ಬದುಕಿಗೆ ಬೇಕಾಗುವ ಸಂಸ್ಕಾರ ಕಲಿಸುವುದು ಪ್ರತಿಷ್ಠಾನದ ಉದ್ದೇಶವಾಗಿದೆ ಎಂದರು.
ಸಂಸ್ಕಾರ ಪ್ರತಿಷ್ಠಾನದ ಸಹಾಯಾರ್ಥ ಪ್ರದರ್ಶನವಾಗಿರುವುದರಿಂದ 300 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಂಗೀತಾಸಕ್ತರು ಟಿಕೆಟ್ ಪಡೆದು ಕಾರ್ಯಕ್ರಮ ವೀಕ್ಷಿಸಬೇಕು. ಟಿಕೆಟ್ ಮತ್ತು ಮತ್ತು ಮಾಹಿತಿಗೆ ಮೊ. 99640 72793, 83108 76277ರಲ್ಲಿ ಸಂಪರ್ಕಿಸಬಹುದು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಶಬರೀಶ್ ಕಣ್ಣನ್, ವಿನಾಯಕ ಬಾಯರಿ, ಮಮತಾ ಪ್ರಸಾದ್, ಎನ್.ಡಿ. ಸತೀಶ್ ಉಪಸ್ಥಿತರಿದ್ದರು.