google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಶಿಕ್ಷಣ ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾಗಿದ್ದ ೧೫೦ ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಎ.ಆರ್. ಅವಿನಾಶ್ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷ ಆರಂಭವಾದ ಅಕಾಡೆಮಿಯಲ್ಲಿ 150 ವಿದ್ಯಾರ್ಥಿಗಳು ೧೦ ತಿಂಗಳ ತರಬೇತಿ ಪಡೆದಿದ್ದು, ಪ್ರಥಮ ಬ್ಯಾಚ್‌ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 150 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಇವರಲ್ಲಿ 35 ವಿದ್ಯಾರ್ಥಿಗಳು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು, ಉಳಿದ 10 ವಿದ್ಯಾರ್ಥಿಗಳು ದಂತ ಹಾಗೂ ಆಯುರ್ವೇದ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನೀಟ್ ಪರೀಕ್ಷೆ ಅತ್ಯಂತ ಕಠಿಣವಾಗಿತ್ತು. ಹಾಗಾಗಿ ಒಟ್ಟು ಫಲಿತಾಂಶ ಸಾಕಷ್ಟು ಕಡಿಮೆಯಾಗಿದೆ. ಆದರೂ ಕೂಡ ಈ ವರ್ಷದಲ್ಲಿ ಮೆಡಿಕಲ್ ಸೀಟುಗಳ ಸಂಖ್ಯೆ ಹೆಚ್ಚು ಮಾಡಿರುವುದರಿಂದ ಕಡಿಮೆ ಅಂಕ ಪಡೆದವರಿಗೂ ಕೂಡ ಮೆಡಿಕಲ್ ಕೋರ್ಸ್‌ಗಳ ಸೀಟು ಸಿಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ೯೦೦ ಮೆಡಿಕಲ್ ಸೀಟುಗಳು ಹೆಚ್ಚಳವಾಗಿವೆ ಎಂದರು.

ದೇಶ್ ನೀಟ್ ಅಕಾಡೆಮಿಯು ವೈದ್ಯರಾಗುವ ಕನಸುಗಳನ್ನು ನನಸು ಮಾಡುವತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಇಲ್ಲಿಯೇ ಹಾಸ್ಟೇಲ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹಾಸ್ಟೆಲ್ ಪ್ರವೇಶವಿಲ್ಲದೆ ಇಲ್ಲಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಶಿವಮೊಗ್ಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಪ್ರವೇಶಕ್ಕೆ ಶೇ. 50ರಷ್ಟು ಕೂಡ ರಿಯಾಯಿತಿ ನೀಡಲಾಗುವುದು. ಅತ್ಯಂತ ಬಡ ಮಕ್ಕಳಿಗೆ ಶುಲ್ಕದಲ್ಲಿ ರಿಯಾಯಿತಿ ಕೂಡ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳು ಸಾಧನೆ ಮಾಡಲು ಶ್ರಮಿಸಿದ ಅಕಾಡೆಮಿಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು. 2024ನೇ ಸಾಲಿನ ಹೊಸ ಬ್ಯಾಚ್‌ಗೆ ಪ್ರವೇಶ ಆರಂಭವಾಗಿದ್ದು, ಶಿವಮೊಗ್ಗ ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ವಿದ್ಯಾರ್ಥಿಗಳು ಈ ಸದಾವಕಾಶ ಪಡೆಯುವಂತೆ ಮನವಿ ಮಾಡಿಕೊಂಡರು. ಪ್ರವೇಶಾತಿ ಅಥವಾ ಹೆಚ್ಚಿನ ಮಾಹಿತಿಗಾಗಿ ಮೊ. 96638-61713, 70192 55688ರಲ್ಲಿ ಸಂಪರ್ಕಿಸಬಹುದಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಕ್ಯಾಂಪಸ್ ಕೋ-ಆರ್ಡಿನೇಟರ್ ವಿಜಯ್, ಜನರಲ್ ಮ್ಯಾನೇಜರ್ ಪ್ರದೀಪ್, ನಾಗರಾಜ್ ಆಚಾರಿ, ಡಿಸಿಲ್ ಇದ್ದರು.

Leave a Reply

Your email address will not be published. Required fields are marked *