
ಶಿವಮೊಗ್ಗ :- ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಒಪಿಎಸ್ ಜರಿಗೊಳಿಸುವುದು ಖಚಿತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧಬಂಗಾರಪ್ಪ ಪುನರುಚ್ಚರಿಸಿದ್ದಾರೆ.
ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕತಿಕ ಸ್ಪರ್ಧೆಗಳಿಗೆ ಹೀಲಿಯಂ ಬಲೂನ್ ಹಾರಿಸುವ ಮೂಲಕ ಕಾರ್ಯಕ್ರಮದ ಪ್ರಚಾರ-ಆಕರ್ಷಣೆಗೆ ಚಾಲನೆ ನೀಡಿದ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದು, ೨೦೦೬ ರ ನಂತರ ನೇಮಕಗೊಂಡ ಸರ್ಕಾರಿ ನೌಕರರಿಗೆ ಎನ್ಪಿಎಸ್ ಬದಲು ಒಪಿಎಸ್ ಜರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆ ಪ್ರಕಾರ ಮುಖ್ಯಮಂತ್ರಿಗಳು ಒಪಿಎಸ್ ಜರಿಗೆ ಉತ್ಸುಕರಾಗಿದ್ದು ಸಧ್ಯದಲ್ಲಿಯೇ ಅದನ್ನು ಜರಿಗೊಳಿಸುವುದಾಗಿ ತಿಳಿಸಿದರು.
ಸರ್ಕಾರಿ ನೌಕರರು ಒಂದರ್ಥದಲ್ಲಿ ಸರ್ಕಾರವೇ ಆಗಿದ್ದಾರೆ. ಅವರ ಕುಟುಂಬದವರು ನೆಮ್ಮದಿಯಿಂದ ಇರುಬೇಕು ಎಂಬುದು ಸರ್ಕಾರದ ಅಭಿಲಾಶೆ ಆಗಿದೆ. ಆ ನಿಟ್ಟಿನಲ್ಲಿ ಒಪಿಎಸ್ ಜರಿ ಖಚಿತ ಎಂದರು.

ಮೂರುದಿನಗಳ ಕ್ರೀಡಾಕೂಟ ನೌಕರರಿಗೆ ಹಬ್ಬದ ವಾತಾವರಣ ನಿರ್ಮಿಸುತ್ತದೆ. ವರ್ಷವಿಡೀ ಕಚೇರಿಯಲ್ಪಿ ಕೆಲಸ ಮಾಡಿ ದಣಿದವರಿಗೆ ಈ ಕ್ರೀಡಾ ಕೂಟ ಮಾನಸಿಕ ನೆಮ್ಮದಿಯ ತಾಣವಾಗುತ್ತದೆ. ೧೫-೨೦ ಸಾವಿರ ಜನ ಪಾಲ್ಗೊಳ್ಳುತ್ತಿರುವುದು ಅಭಿನಂದನೀಯ. ಕುವೆಂಪು ಮೊದಲಾದ ಸಾಹಿತಿಗಳು ವರ್ಣಿಸಿದ ಮಲೆನಾಡಿನ ಈ ಭಾಗದಲ್ಲಿ ಜರುಗುವ ಈ ಕ್ರೀಡಾ ಉತ್ಸವದ ಪ್ರಯೋಜನವನ್ನು ಎಲ್ಲಾ ಸರ್ಕಾರಿ ನೌಕರರು ಪಡೆಯಬೇಕು ಎಂದು ಆಶಿಸಿದರು.
ಮೂರುದಿನಗಳ ಕ್ರೀಡಾಕೂಟದ ಮಧ್ಯದಲ್ಲಿ ಯಾವಾಗಲಾದರೂ ಮುಖ್ಯಮಂತ್ರಿಗಳು ಆಗಮಿಸಿ ಶುಭಕೋರುವ ಸಾಧ್ಯತೆಯಿದೆ ಎಂದು ಕ್ರೀಡಾಪಟುಗಳನ್ನು ಸಚಿವರು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್.ಷಡಕ್ಷರಿ, ಆರ್.ಪ್ರಸನ್ನಕುಮಾರ್ ಮೊದಲಾದವರಿದ್ದರು
