google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸುಮಾರು ಎರಡು ದಶಕಗಳ ಹಿಂದೆ ಹೆಚ್.ಎಂ. ಚಂದ್ರಶೇಖರಪ್ಪನವರ ಶಿವಮೊಗ್ಗ ಕ್ಷೇತ್ರ ಶಾಸಕರಾಗಿದ್ದ ಅವಧಿಯಲ್ಲಿ ನಗರದ ಹಳೇ ಬೊಮ್ಮನಕಟ್ಟೆಯಲ್ಲಿ ಸುಮಾರು ೩ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಾಗಿಟ್ಟಿದ್ದರು. ಆಗ ಸ್ಥಳೀಯ ನಿವಾಸಿಗಳು ಇದರ ಸದುಪಯೋಗ ಪಡೆಯುತ್ತಿದ್ದರು.

ನಂತರ ದಿನಗಳಲ್ಲಿ ಈ ಭಾಗದಲ್ಲಿ ಲೇಔಟ್‌ಗಳಾದವು. ಜೊತೆಗೆ ಮುಖ್ಯವಾಗಿ ಆಶ್ರಯ ಬಡಾವಣೆ ಆದ ಸಂದರ್ಭದಲ್ಲಿ ಬೊಮ್ಮನಕಟ್ಟೆಗೆ ಸಾಕಷ್ಟು ಹೆಸರು ಬಂತು. ಆದರೆ ಚಂದ್ರಶೇಖರಪ್ಪ ಅವರು ಸ್ಮಶಾನಕ್ಕೆ ಒದಗಿಸಿದ್ದ ಜಾಗವು ಅಭಿವೃದ್ಧಿ ಕಾಣಲಿಲ್ಲ. ಇದರಿಂದ ಸ್ಮಶಾನಕ್ಕೆ ಮೂಲ ಭೂತ ಸೌಲಭ್ಯವಿಲ್ಲದೆ ಪಾಳು ಬಿದ್ದಂತಾಗಿತ್ತು.

ಸ್ಮಶಾನ ಅಭಿವೃದ್ಧಿಗೊಳಿಸಲು ಹಳೇ ಬೊಮ್ಮನಕಟ್ಟೆಯ ನಿವಾಸಿಗಳು ಇತ್ತೀಚೆಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದರು. ಇದಕ್ಕೆ ಸ್ಪಂಧಿಸಿದ ಆಯುಕ್ತರು ಸ್ಮಶಾನದ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಎಂಎಲ್‌ಸಿ ಬಲ್ಕಿಶ್ ಭಾನು, ಆಯುಕ್ತರಾದ ಕವಿತಾ ಯೋಗಪ್ಪ ನವರ್ ಅವರು ಸ್ಥಳ ಪರಿಶೀಲನೆ ನಡೆಸಿ ಮೂಲಭೂತ ಸೌಕರ್ಯ ನೀಡಲು ಮುಂದಾಗಿದ್ದಾರೆ.

ಸ್ಮಶಾನಕ್ಕೆ ಮೂಲಭೂತ ಸೌಕರ್ಯ ನೀಡಲು ಸ್ಪಂಧಿಸಿದ ಎಂಎಲ್‌ಸಿ ಅವರಿಗೆ ಮತ್ತು ಆಯುಕ್ತರಿಗೆ ಸಮಾಜ ಸೇವಕ ಎಸ್. ಸಿದ್ಧೇಶ್, ವಾರ್ಡಿನ ಪ್ರಮುಖರಾದ ಮಾಲತೇಶ್, ಮಹೇಶ್, ಮೋಹನ್, ಪರಮೇಶ್ವರಪ್ಪ, ಶ್ರೀಕಾಂತ್, ಸಿದ್ದೇಶ್, ಅನಂತ, ಪ್ರಕಾಶ್, ಶೃತಿ, ಜ್ಯೋತಿ ಹಾಗೂ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *