google.com, pub-9939191130407836, DIRECT, f08c47fec0942fa0

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರಿಗೆ ಪೊಲೀಸ್ ಭದ್ರತೆ ನೀಡುವಂತೆ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಡಿ.ಮಂಜುನಾಥ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರ ಪರಮಾಧಿಕಾರ, ಅಸಂವಿಧಾನಿಕ ನಡೆಯ ವಿರುದ್ಧ ೩ ವರ್ಷಗಳಿಂದ ನಿರಂತರವಾಗಿ ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸುತ್ತಿದ್ದೇನೆ. ಇದರ ಪರಿಣಾಮ ವಾಗಿ ಕಸಾಪ ಆಜೀವ ಸದಸ್ಯತ್ವ ದಿಂದಲೇ ಅಮಾನತು ಮಾಡುವ ಷೋಕಾಸ್ ನೀಡಿ ಬೆದರಿಕೆ ಒಡ್ಡಿದ್ದಾರೆ. ಇದೇ ಮೇ 14 ರಂದು ಬೆಂಗಳೂರಿನ ಕಸಾಪ ಕೇಂದ್ರ ಕಛೇರಿ ಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಡಿ. ಮಂಜುನಾಥ ಅವರು ಚರ್ಚಿ ಸಲು ಬಯಸಿರುವ ಅಂಶಗಳನ್ನು ಹಾಗೂ ಸಭೆಯಲ್ಲಿ ಮಾತನಾಡಲು ಅಗತ್ಯ ಅನುಮತಿಯನ್ನು ನೀಡುವಂತೆ ಕೋರಿ ಕಸಾಪ ರಾಜ್ಯಾಧ್ಯಕ್ಷರಿಗೆ ಈಗಾಗಲೇ ಪತ್ರ ಬರೆದಿದ್ದಾರೆ.

ಇದರಿಂದ ಕೆರಳಿ, ತಮ್ಮ ಮೇಲೆ ದ್ವೇಷ ಅಸೂಯೆಯಿಂದ ಸಭೆಯಲ್ಲಿನ ಘಟನಾವಳಿಗಳನ್ನು ತಿರುಚಿ, ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇರುವುದರಿಂದ ಹಾಗೂ ರಾಜ್ಯಾಧ್ಯಕ್ಷರ ಬೆಂಬಲಿಗರಿಂದಲೂ ಅಪಾಯವಿರುವುದರಿಂದ, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕಾರಿ ಸಮಿತಿ ಸಭೆಗೆ ಭಾಗವಹಿಸಲು ಅಗತ್ಯ ಪೊಲೀಸ್ ಭದ್ರತೆ ನೀಡಲು ಡಿ.ಮಂಜುನಾಥ ಮನವಿ ಮಾಡಿದ್ದಾರೆ. ಜೊತೆಯಲ್ಲಿ ಮಹೇಶ್ ಜೋಷಿ ಅವರು ನೀಡುತ್ತಿರುವ ಮಾನಸಿಕ ಕಿರುಕುಳ ಮತ್ತು ಸಭೆಯಲ್ಲಿ ಮಾಡಿದ ಅಪಮಾನದ ಕುರಿತು ದೂರು ದಾಖಲಿಸುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮನವಿ ಸಂದರ್ಭದಲ್ಲಿ ಹಿರಿಯ ವಕೀಲ ಕೆ.ಪಿ.ಶ್ರೀಪಾಲ್, ಪದಾಧಿಕಾರಿಗಳಾದ ಕೃಷ್ಣಮೂರ್ತಿ ಹಿಳ್ಳೋಡಿ, ಎಂ.ನವೀನ್ ಕುಮಾರ್, ಕೆ.ಜಿ.ವೆಂಕಟೇಶ್, ಶಿವಪ್ಪಗೌಡ, ನಾರಾಯಣ್, ವೀರೇಶ್ ಇದ್ದರು.

Leave a Reply

Your email address will not be published. Required fields are marked *