
ಶಿವಮೊಗ್ಗ :- ಜನಗಣತಿ ವರದಿಯಲ್ಲಿ ಕುಂಚಿಟಿಗರ ಸಂಖ್ಯೆ ತಪ್ಪಾಗಿದ್ದು, ಮತ್ತೊಮ್ಮೆ ಜನಗಣತಿ ಮಾಡಬೇಕು ಎಂದು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಹೆಚ್.ರಂಗ ಹನುಮಯ್ಯ ಆಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಂತರಾಜ್ ಜನಗಣತಿ ವರದಿಯಲ್ಲಿ ಕುಂಚಿಟಿಗ ಜನಾಂಗಕ್ಕೆ ಆಗಿರುವ ತಪ್ಪ ಜನಗಣತಿಯನ್ನು ಸರಿಪಡಿಸಿ ಆಯೋಗದಿಂದ ಮತ್ತೆ ಜನಗಣತಿ ಮಾಡಿಸಿ ಸರ್ಕಾರದ ಕ್ಯಾಬಿನೆಟ್ನಲ್ಲಿ ಅನುಮೋದನೆ ಮಾಡಬೇಕು ಎಂದರು.
ಪ್ರಸ್ತುತ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕಾಂತರಾಜ್ ಆಯೋಗದ ವರದಿಯಲ್ಲಿ ಪ್ರವರ್ಗ 3ಎನಲ್ಲಿ ಬರುವ ಕುಂಚಿಟಿಗ ಒಕ್ಕಲಿಗರು ಸೇರಿದಂತೆ 2.36 ಲಕ್ಷ ಎಂದು ಹೇಳಲಾಗಿದೆ. ಆದರೆ ಇದು ಸುಳ್ಳಾಗಿದ್ದು ನಾವು ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚಾಗಿದ್ದೇವೆ. ಇದು ಅತ್ಯಂತ ಅವೈಜನಿಕವಾಗಿದೆ ಎಂದರು.
ಜಾತಿಗಣತಿ ಸಂದರ್ಭದಲ್ಲಿ ಕುಂಚಿಟಿಗರು ಜತಿ ಕಾಲಂನಲ್ಲಿ ಒಕ್ಕಲಿಗ ಎಂದು ಉಪಜತಿ ಕಾಲಂನಲ್ಲಿ ಕುಂಚಿಟಿಗ ಎಂದು ಬರೆಸಿದ್ದಾರೆ. ಆದರೆ ಇದು ತಪ್ಪಾಗಿದೆ. 1920-21ರ ಜನಗಣತಿಯಲ್ಲಿ ಮೈಸೂರು ರಾಜರಿಗೆ ಮನವಿ ಮಾಡಿದಾಗ, ಕುಂಚಿಟಿಗ ಎಂಬುವುದು ಹಿಂದೂ ಧರ್ಮದಲ್ಲಿ ಒಂದು ಸ್ವತಂತ್ರ ಜತಿ ಎಂದು ಬರೆಸಿದ್ದಾರೆ. ಆದ್ದರಿಂದ ಈ ವರದಿ ಸತ್ಯಕ್ಕೆ ದೂರವಾಗಿದೆ. ಶಿವಮೊಗ್ಗ ಜಿಲ್ಲೆ ಒಂದರಲ್ಲಿಯೇ ನಾವು ಸುಮಾರು 50 ಸಾವಿರಕ್ಕೂ ಹೆಚ್ಚು ಜನರಿದ್ದೇವೆ. ಬೆಂಗಳೂರು ಜಿಲ್ಲೆಯಲ್ಲಿ 48ಕ್ಷಕ್ಕೂ ಹೆಚ್ಚು ಜನರಿದ್ದಾರೆ. ಸುಮಾರು 19ಜಿಲ್ಲೆಗಳಲ್ಲಿ ನಮ್ಮ ಜನಾಂಗ ವಿಸ್ತರಣೆಯಾಗಿದೆ ಎಂದರು.

ಜಿಲ್ಲಾಧ್ಯಕ್ಷ ಕಾಂತರಾಜ್ ಸೋಮಿನಕೊಪ್ಪ ಮಾತನಾಡಿ, ಕುಂಚಿಟಿಗರು, ಕುಂಚಒಕ್ಕಲು, ಗೌಂಡರ್, ನಾಮಧಾರಿ, ಕಾಮಾಟಿ, ಲಿಂಗಾಯಿತ ಕುಂಚಿಟಿಗ, ಒಕ್ಕಲಿಗ ಕುಂಚಿಟಿಗ ಇವೆಲ್ಲವೂ ಕುಂಚಿಟಿಗ ಜತಿಗೆ ಸೇರುತ್ತವೆ. ಆದ್ದರಿಂದ ಇದನ್ನು ಮನಗಂಡು ಕಾಂತರಾಜ್ ಜನಗಣತಿ ವರದಿಯಲ್ಲಿ ನಮ್ಮ ಜನಾಂಗಕ್ಕೆ ಅನ್ಯಾಯವಾಗಿರುವುದನ್ನು ಸರಿಪಡಿಸಲು ನಮಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಮೂಲಕ, ಮತ್ತು ಮರುಜನಗಣತಿ ಮಾಡುವ ಮೂಲಕ ನಮಗೆ ನ್ಯಾಯ ಒದಗಿಸಬೇಕು, ಮತ್ತು ಜನಗಣತಿ ಮಾಡುವಾಗ ಆಧಾರ್ಕಾರ್ಡ್ಲಿಂಕ್ನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಹಾಮಂಡಲದ ಕಾರ್ಯದರ್ಶಿ ಎಂ.ರಂಗರಾಜು, ಖಜಂಚಿ ವೆಂಕಟೇಶ್ ಆರ್ ಸವಣೂರ, ಪ್ರಮುಖರಾದ ಎಸ್.ಎಲ್.ಗೋವಿಂದರಾಜ್, ಆಂಜನಪ್ಪ, ಲೋಹಿತ್, ರಾಘವೇಂದ್ರ, ಹಾಲೇಶ್, ಕೃಷ್ಣಮೂರ್ತಿ ಮುಂತಾದವರು ಇದ್ದರು.
