google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮೂರ್ತಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ೨೦೨೪ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಕಳೆದ ಎರಡು ದಶಕಗಳಿಂದ ಶಿವಮೊಗ್ಗ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಲಂಕೇಶ್ ಪತ್ರಿಕೆ ಸೇರಿದಂತೆ ಅನೇಕ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಆರುಂಡಿ ಶ್ರೀನಿವಾಸ್ ಮೂರ್ತಿ ಲೇಖಕರೂ, ಕವಿಗಳೂ ಆಗಿದ್ದಾರೆ.

ಶ್ರೀನಿವಾಸ್‌ಮೂರ್ತಿ ಅವರ ಕಪ್ಪುಮಣ್ಣಿನ ಕಣ್ಣು ಕಥನ ಕೃತಿ, ಮೊಡವೆ ಮತ್ತು ನಾನು , ಹುಣ್ಣಿಮೆ ಪದ್ಯಗಳು ಕವನ ಸಂಕಲನಗಳು ಪ್ರಕಟಗೊಂಡಿವೆ.ಕೇವಲ ಸುದ್ದಿಬರಹಗಳಲ್ಲಿ ಅಷ್ಟೆ ಅಲ್ಲದೆ ರಂಗಭೂಮಿ, ಜನಪದ ಕ್ಷೇತ್ರಗಳ ಬಗ್ಗೆ ಅತೀವ ಅಸಕ್ತಿ ಹೊಂದಿರುವ ಶ್ರೀನಿವಾಸ್ ಮೂರ್ತಿ ವಿಮರ್ಶಾ ಬರಹಗಳಲ್ಲೂ ಸಿದ್ದ ಹಸ್ತರು. ಇವರ ವೃತ್ತಿ ಕೌಶಲ್ಯ ಮತ್ತು ಸುದೀರ್ಘ ಕಾಲದ ಸೇವೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ೨೦೨೪ ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಗೌರವಿಸಿದೆ.

Leave a Reply

Your email address will not be published. Required fields are marked *