google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಹಸಿವು ನೀಗಿಸುವ ಅನ್ನ ಪರಬ್ರಹ್ಮ. ಆಹಾರವೇ ದೇವರು. ಆದ್ದರಿಂದ ಆಹಾರ ವ್ಯರ್ಥ ಮಾಡ ಬಾರದು ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ವಿ. ನಾಗೇಶ್ ಮನವಿ ಮಾಡಿದರು.

ತಾಲೂಕಿನ ಕುಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ್ಯಾದ್ರಿ ಇಕೋ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಅಬ್ಬಲಗೆರೆ ಬಳಿಯ ಈಶ್ವರವನದಲ್ಲಿ ಹಮ್ಮಿಕೊಂಡಿದ್ದ ನಿಸರ್ಗ ನಡಿಗೆ ಸಂದರ್ಭದಲ್ಲಿ ವನ ಭೋಜನ ಏರ್ಪಡಿಸಿದ್ದ ಅವರು ಮಕ್ಕಳಿಗೆ ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿದರು.

ದೇಶದಲ್ಲಿ ಹಲವಾರು ಮಂದಿ ಒಂದು ಹೊತ್ತಿ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಶೇ. 30ರಷ್ಟು ಮಂದಿ ಮೂರು ಹೊತ್ತು ಊಟ ಮಾಡಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿದ್ದಾರೆ. ಶೇ. 10ಮಂದಿ ಒಪ್ಪತ್ತಿನ ಊಟ ಮಾಡುತ್ತಿದ್ದಾರೆ. ಒಂದೆಡೆ ಹಸಿವು ನೀಗಿಸಿಕೊಳ್ಳಲು ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಹಾಕಿಸಿಕೊಂಡ ಆಹಾರವನ್ನು ಸಂಪೂರ್ಣವಾಗಿ ತಿನ್ನದೆ ವ್ಯರ್ಥ ಮಾಡಿ ಕಸದ ತೊಟ್ಟಿಗೆ ಬಿಸಾಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ಹಸಿವು ಎಷ್ಟಿದೆಯೋ ಅಷ್ಟು ಪ್ರಮಾಣ ದಲ್ಲಿ ಆಹಾರವನ್ನು ತಟ್ಟೆಗೆ ಬಡಿಸಿಕೊಳ್ಳ ಬೇಕು. ಕಡಿಮೆ ಆಹಾರ ಸೇವಿಸು ವವರು, ಹೆಚ್ಚು ತಿನ್ನುವವರಿಗಿಂತ ಆರೋಗ್ಯವಂತರೂ ದೀರ್ಘಾಯುಷಿ ಗಳೂ ಆಗಿರುತ್ತಾರೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ತಿಳಿಸಿದರು.

ತುತ್ತನ್ನು ಬಾಯಿಗಿಡುವ ಮೊದಲು ತಟ್ಟೆಯಲ್ಲಿರುವ ಆಹಾರಕ್ಕೆ ಮನಃ ಪೂರ್ವಕವಾಗಿ ವಂದಿಸಬೇಕು. ಇದರಿಂದ ಆಹಾರದ ಬಗೆಗೆ ಪೂಜನೀಯ ಭಾವ ಬರುವುದರ ಜೊತೆಗೆ, ತಟ್ಟೆಯಲ್ಲಿ ಆಹಾರವನ್ನು ವ್ಯರ್ಥವಾಗಿ ಬಿಡಲು ಮನಸ್ಸು ಬರುವುದಿಲ್ಲ. ಅಲ್ಲದೆ ಆಹಾರ ಬಡಿಸುವವರು ಊಟಕ್ಕೆ ಕುಳಿತವರಿಗೆ ಹೆಚ್ಚಿಗೆ ತಿನ್ನಲು ಬಲವಂತಪಡಿಸ ಬಾರದು. ಅವರಿಗೆಷ್ಟು ಬೇಕೋ ಅಷ್ಟನ್ನೇ ಕೇಳಿ ಬಡಿಸಬೇಕೆಂದರು.

ಮದುವೆ ಮತ್ತಿತರೆ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಊಟ, ಉಪಾಹಾರ ವ್ಯರ್ಥ ಮಾಡುವುದನ್ನು ಸಂಪೂರ್ಣವಾಗಿ ನಿಬಂಧಿಸಬೇಕು. ಅನ್ನದ ಮಹತ್ವ ಅರಿತು ಹಸಿವಿಗೆ ಅನುಗುಣವಾಗಿ ಆಹಾರ ಸೇವಿಸಿ ಸಾಮಾಜಿಕ ಬದ್ಧತೆ ಕಾಪಾಡುವುದರ ಜೊತೆಗೆ ಆರೋಗ್ಯ ಸಂರಕ್ಷಿಸಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆಯೂ ವಿವರಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಬಹುತೇಕವಾಗಿ ಕಡಿಮೆ ಮಾಡಬೇಕು. ತರಕಾರಿ, ಹಣ್ಣು-ಹಂಪಲು, ದಿನಸಿ ಮತ್ತಿತರೆ ವಸ್ತುಗಳನ್ನು ಖರೀದಿಸಲು ಬಟ್ಟೆ ಚೀಲ ಬಳಸುವಂತೆ ಮಕ್ಕಳು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಪ್ರಭಾರ ಮುಖ್ಯ ಶಿಕ್ಷಕಿ ವಿ.ಜಿ. ಭುವನೇಶ್ವರಿ, ಶಿಕ್ಷಕರುಗಳಾದ ಲೀಲಾ ಡಿ.ಜಿ., ಪ್ರೇಮ್ ಕುಮಾರ್ ಎನ್.ಸಿ. ಭಾಗವಹಿಸಿದ್ದರು.

Leave a Reply

Your email address will not be published. Required fields are marked *