ದೇಶ್ ನೀಟ್ ಅಕಾಡೆಮಿ ಮೇ ತಿಂಗಳಲ್ಲಿ ಅಧಿಕೃತವಾಗಿ ಆರಂಭ

ಶಿವಮೊಗ್ಗ :- ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಯಶಸ್ಸನ್ನು ಸಾಧಿಸಲು ಮಹತ್ವಾಕಾಂಕ್ಷಿ  ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೀಸಲಾಗಿರುವ ಶಿವಮೊಗ್ಗದ ಪ್ರಥಮ ವಸತಿ ಸಹಿತ ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸಂಸ್ಥೆಯಾದ ದೇಶ್ ನೀಟ್ ಅಕಾಡೆಮಿ ಮೇ ತಿಂಗಳಲ್ಲಿ ಅಧಿಕೃತವಾಗಿ ಆರಂಭಗೊಳಲಿದೆ ಎಂದು ಅಕಾಡೆಮಿಯ ಮುಖ್ಯಸ್ಥ ರಾಕೇಶ್ ವಿನ್ಸೆಂಟ್ ಡಿಸೋಜ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೀಟ್ ಆಕಾಂಕ್ಷಿಗಳಲ್ಲಿ ಸಮಗ್ರ ಮತ್ತು ವೈಯುಕ್ತಿಕಗೊಳಿಸಿದ ತರಬೇತಿ ಒದಗಿಸುವ ಗುರಿಯನ್ನು ಅಕಾಡೆಮಿ ಹೊಂದಿದ್ದು, ಅನುಭವಿ ಅಧ್ಯಾಪಕರು, ಅತ್ಯಾಧುನಿಕ ಸೌಲಭ್ಯಗಳು ಮತ್ತು ನವೀನ  ಬೋಧನಾ ವಿಧಾನಗಳನ್ನು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಉತ್ಕೃಷ್ಟಗೊಳಿಸಲು ಮತ್ತು ಉನ್ನತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.

ಶಿವಮೊಗ್ಗದ ಗಂಧರ್ವ ನಗರದಲ್ಲಿ ಆರಂಭಗೊಳ್ಳಲಿರುವ ಅಕಾಡೆಮಿಯಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದಾಗಿದೆ. ಮಲೆನಾಡು ಭಾಗದ ವಿದ್ಯಾರ್ಥಿಗಳು ನೀಟ್ ಕೋಚಿಂಗ್‌ಗಾಗಿ ದೂರ ದೂರದ ಊರುಗಳಿಗೆ ಅಲೆದಾಡುವ ಹಾಗೂ ಸಮಯ ವ್ಯರ್ಥ ಮಾಡುವ ಅಗತ್ಯ ಇರುವುದಿಲ್ಲ ಎಂದರು.

ಅಕಾಡೆಮಿ ವತಿಯಿಂದ ಉಚಿತ ಭೌತಶಾಸ್ತ್ರ  ಅನುಮಾನ ನಿವಾರಣಾ ತರಗತಿ ಶಿಬಿರವನ್ನು ಏ. 24ರ ಇಂದಿನಿಂದ 30ರವರೆಗೆ ಬೆಳಿಗ್ಗೆ 10 ರಿಂದ 1 ಮತ್ತು ಸಂಜೆ 5 ರಿಂದ 7ರವರೆಗೆ ಬಸವೇಶ್ವರ ನಗರದಲ್ಲಿರುವ ಆಕ್ಸ್‌ಫರ್ಡ್ ಶಾಲೆಯಲ್ಲಿ ನಡೆಯಲಿದ್ದು, ಉಚಿತ ಪ್ರವೇಶವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ಎ.ರಮಣ, ಅಭಿಷೇಕ್ ಹಿರೇಮಠ್ ಉಪಸ್ಥಿತರಿದ್ದರು.

Abhi

Abhi

Leave a Reply

Your email address will not be published. Required fields are marked *