Flowers in Chania

ವಿದ್ಯಾರ್ಥಿನಿ ನೇಹಾಳ ಹತ್ಯೆ ಆರೋಪಿಗೆ ಕಠಿಣ ಕ್ರಮ ಜರುಗಿಸಲು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂಒತ್ತಾಯ

ಶಿವಮೊಗ್ಗ :- ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ದಾರುಣ ಹತ್ಯೆಯು ರಾಜ್ಯ ದಲ್ಲಿನ ಮಹಿಳಾ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯಾಗಿರುವುದರಿಂದ ಹತ್ಯೆಯ ಆರೋಪಿ ಫಯಾಜ್ ಹಾಗೂ ಆತನಿಗೆ ಸಹಕರಿಸಿರುವವರ ಮೇಲೆ ಕಠೀಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಸಂಸ್ಥೆಯು ಜಿಲ್ಲಾಧಿಕಾರಿಗಳ ಮೂಲಕ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ, ಮನವಿ ಸಲ್ಲಿಸಿತು.

ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಬಿವಿಬಿ ಇಂಜಿನಿ ಯರಿಂಗ್ ವಿದ್ಯಾರ್ಥಿನಿ ನೇಹಾಳನ್ನು ಕಾಲೇಜು ಕ್ಯಾಂಪಸ್‌ನಲ್ಲಿ ವಿಕೃತವಾಗಿ ಚೂರಿ ಇರಿದು ಕೊಲೆಗೈದ ಘಟನೆ ಇಡೀ ಮನುಕುಲವೇ ಕಲಕು ವಂv ದ್ದಾಗಿದೆ, ಈ ಘಟನೆಯನ್ನು ಕುರಿತು ತನಿಖಿಸುತ್ತಿರುವ ಸಿಐಡಿ ವಿಭಾಗವು ಯಾವುದೇ ಒತ್ತಡಕ್ಕೆ ಸಿಲುಕದೆ ನೈಜ ತನಿಖೆಗೆ ಮುಂದಾಗು ವಂತೆ ಹಾಗೂ ಕಾಲೇಜು ಕ್ಯಾಂಪಸ್ ಕುರಿತು ಸೂಕ್ತ ಭದ್ರತೆ ನೀಡಲಾಗದೆ ಇರುವ ಆಡಳಿತ ಸಂಸ್ಥೆಯ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.

ವಿದ್ಯಾರ್ಥಿನಿ ನೇಹಾಳ ದಾರುಣ ಹತ್ಯೆಯು ರಾಜ್ಯದಲ್ಲಿನ ಮಹಿಳಾ ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆಯಾಗಿದೆ, ಹಾಗೂ ವಿದ್ಯಾರ್ಥಿನಿ ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ನೀಡಲಾಗದ ಹಾಗೂ ಈ ಪ್ರಕರಣದ ನಂತರವೂ ಭದ್ರತೆಗೆ ಮುಂದಾಗದ ರಾಜ್ಯದ ಎಲ್ಲಾ ಸರಕಾರಿ, ಅರೆ ಸರಕಾರಿ ಮತ್ತು ಖಾಸಾಗಿ ಕಾಲೇಜು ಕ್ಯಾಂಪಸ್‌ಗಳ ಆಡಳಿತಾಧಿಕಾರಿಗಳ ಮೇಲೆ ಹಾಗೂ ವ್ಯವಸ್ಥಾಪಕ ಆಡಳಿತ ಮಂಡಳಿಗಳ ಮೇಲೆ ಗುಂಡಾಕಾಯ್ದೆಯನ್ವಯ ಕೇಸು ದಾಖಲಿಸಲು ಒತ್ತಾಯಿಸಿದೆ.

ಈ ಕೂಡಲೇ ಘಟನೆಯನ್ನು ಆಧರಿಸಿ ರಾಜ್ಯದ ಎಲ್ಲಾ ಕಾಲೇಜು ಕ್ಯಾಂಪಸ್‌ಗಳಿಗೆ ಭದ್ರತೆಯನ್ನು ಪ್ರಶ್ನಿಸಿ ನೋಟಿಸ್ ಜರಿಗೊಳಿಸಬೇಕು, ಇಂತಹ ಯಾವುದೇ ಘಟನೆಗಳು ಮರು ಘಟಿಸಿದರೆ ಹಾಗೂ ಡ್ರಗ್ ಪೆಡ್ಲರ್‌ಗಳಿಂದ ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ತುತ್ತಾಗಿದ್ದು ಕಂಡುಬಂದರೆ ಆಡಳಿತಾಧಿಕಾರಿಗಳು ಹಾಗೂ ವ್ಯವಸ್ಥಾಪಕ ಆಡಳಿತ ಮಂಡಳಿಗಳ ಮೇಲೆ ಹೊಣೆಗಾರಿಕೆ ಮಾಡಿ ಭಾರತೀಯ ದಂಡ ಸಂಹಿತೆ ಪ್ರಕಾರ ಕೇಸು ದಾಖಲಿಸಲು ಆಗ್ರಹಿಸಿದೆ.

ಮನವಿ ಸಂದರ್ಭದಲ್ಲಿ ಅಧ್ಯಕ್ಷೆ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷ ಕೆ.ಎಸ್ ಶಶಿ, ಪ್ರಧಾನ ಕಾರ್ಯದರ್ಶಿ ಗಾರಾ. ಶ್ರೀನಿವಾಸ್ ಸಹ ಕಾರ್‍ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್ ಇನ್ನಿತರರಿದ್ದರು.

Abhi

Abhi

Leave a Reply

Your email address will not be published. Required fields are marked *