ನಗರದಲ್ಲಿ ದುಷ್ಕರ್ಮಿಗಳಿಂದ ಸರ ಅಪಹರಣ : ಧನುರ್ಮಾಸ ಪೂಜೆಗೆ, ವಾಕಿಂಗ್ ಗೆ ಹೋಗುವ ಮಹಿಳೆಯರೇ ಟಾರ್ಗೆಟ್…

ಶಿವಮೊಗ್ಗ :- ಧನುರ್ಮಾಸ ಪೂಜೆಗೆ ತೆರಳುವ ಮತ್ತು ವಾಕಿಂಗ್ ಗೆ ಹೋಗಿದ್ದ ಮಹಿಳೆಯರ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ಅಪಹರಿಸಿರುವ ಘಟನೆ ನಗರದ ಮೂರು ಠಾಣ ವ್ಯಾಪ್ತಿಯಲ್ಲಿ ನಡೆದಿದ್ದು, ಇನ್ನೊಂದೆಡೆ ಕಳ್ಳತನಕ್ಕೆ ಯತ್ನ ನಡೆದಿದೆ.

ಇಂದು ಬೆಳಿಗ್ಗೆ ವಿನೋಬನಗರ ಪೊಲೀಸ್ ಠಾಣೆ, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣ ನಡೆದಿದೆ.

ಆದಿಚುಂಚನಗಿರಿ ಬಳಿ ಬೆಳಿಗ್ಗೆ ಧನುರ್ಮಾಸ ಪೂಜೆಗೆ ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಲಲಿತಮ್ಮ ಎಂಬುವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಕಳುವು ಮಾಡಲಾಗಿದೆ.

ಕೆಲವೇ ಸಮಯದಲ್ಲಿ ವಿನೋಬನಗರದ 60ಅಡಿ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದ ಸೂರ್ಯ ಎಂಬ 21 ವರ್ಷದ ಯುವತಿ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ‌ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಕದ್ದುಕೊಂಡು ಹೋಗಿದ್ದಾರೆ.

ಕೋಟೆ ಪೊಲಿಸ್ ಠಾಣೆಯ ಪೋಸ್ಟ್ ಆಫೀಸ್ ಎದುರಿನ ಮನೆಯ ಮುಂದೆ ಮಹಿಳೆಯೊಬ್ಬರು ರಂಗೋಲಿ ಹಾಕುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳುವಿಗೆ ಯತ್ನಿಸಲಾಗಿದೆ.

ವಿಫಲ ಯತ್ನದ ನಂತರ ಆದಿಚುಂಚನಗಿರಿ ಶಾಲೆಯ ಬಳಿ ಬಂದ ಇದೇ ಗ್ಯಾಂಗ್ 6.20 ರ ಸಮಯಕ್ಕೆ ಸರಿಯಾಗಿ ಲಲೀತಮ್ಮ ಎಂಬ ಶರಾವತಿ ನಗರ ನಿವಾಸಿಯ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಮತ್ತು ವಿನೋಬನಗರ ಠಾಣೆ ವ್ಯಾಪ್ತಿಯ ಸೂರ್ಯ ಎಂಬ ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಳುವು ಮಾಡಿದ್ದಾರೆ.

ಈ ಹಿಂದೆ ಮನೆಗೆ ಬಂದು ಚಿನ್ನದ ಲೇಪನ ಹಾಕುವುದಾಗಿ ನಂಬಿಸಿ ಅಡುಗೆ ಮನೆಯಿಂದಲೇ ಚಿನ್ನಾಭರಣ ಕಳುವು ನಡೆದಿತ್ತು. ಇದಾದ ನಂತರ ಪೊಲೀಸರು ಎಂದು ಹೇಳಿ ಸಹಾಯಮಾಡುವುದಾಗಿ ಹೇಳಿ ಪೇಪರ್ ನಲ್ಲಿ ಸುತ್ತಿಕೊಡುವ ಪ್ರಯತ್ನ ನಡೆದಿತ್ತು. ಈಗ ದೇವಸ್ಥಾನ ಮತ್ತು ವಾಕಿಂಗ್ ಗೆ ಹೋಗುವವರು, ಸರಗಳ್ಳರ ಟಾರ್ಗೆಟ್ ಆಗಿದ್ದಾರೆ.

ಆಡಗಲೇ ಬೈಕಿನಲ್ಲಿ ಬಂದು ಸರಗಳ್ಳರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.