Flowers in Chania

ಅಂತರ ರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ 21ದಿನಗಳ ವಿಶೇಷ ಬೇಸಿಗೆ ಶಿಬಿರ

ಶಿವಮೊಗ್ಗ :- ಜಿಲ್ಲಾಡಳಿತ, ಜಿ.ಪಂ. ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಜಿಲ್ಲಾ ಕ್ರೀಡಾ ಸಂಕೀರ್ಣ ಗೋಪಾಳದ ಅಂತರ ರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಈಜುಕೊಳದಲ್ಲಿ 21 ದಿನಗಳ ವಿಶೇಷ ತರಬೇತಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮಾಹಿತಿ ನೀಡಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಅಂತರ ರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ 21 ದಿನಗಳ ವಿಶೇಷ ಬೇಸಿಗೆ ತರಬೇತಿ ಶಿಬಿರ ನಡೆಸುವ ಸಲುವಾಗಿ ಕರಪತ್ರ, ಬ್ಯಾನರ್ ಗಳನ್ನು ಒಂದು ತಿಂಗಳ ಮುಂಚಿತವಾಗಿ ನಗರದ ಎಲ್ಲಾ ಕಡೆ ಅಳವಡಿಸಿ ಪ್ರಚಾರ ನೀಡಿ ತರಬೇತಿಗೆ ಪ್ರವೇಶವನ್ನು ಪಡೆಯಲಾಗುತ್ತಿದೆ. ಮೊದಲನೇ ಶಿಬಿರವನ್ನು ಮಾರ್ಚ್ ಮಾಹೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಎರಡನೇ ಶಿಬಿರವನ್ನು ಏ. 2ರಿಂದ 26ರವರೆಗೆ ಮತ್ತು ಮೂರನೇ ಶಿಬಿರವನ್ನು ಮೇ. 2 ರಿಂದ 25ರವರೆಗೆ ಆಯೋಜಿಲಾಗಿದೆ ಎಂದರು.

ಶಿಬಿರದಲ್ಲಿ 4 ವರ್ಷದಿಂದ ಎಲ್ಲಾ ವಯಸ್ಸಿನವರಿಗೆ ಈಜು ತರಬೇತಿಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶಿಬಿರದಲ್ಲಿ  5ರಿಂದ 15 ವರ್ಷದವರೆಗಿನ ಮಕ್ಕಳಿಗೆ ಸ್ಟೇಟಿಂಗ್ ತರಬೇತಿಯನ್ನು ಹಾಗೂ ೬ ವರ್ಷದಿಂದ ಎಲ್ಲಾ ವಯಸ್ಸಿನವರಿಗೆ ಲಾನ್ ಟೆನ್ನಿಸ್ ತರಬೇತಿ ನೀಡಲು ತಯಾರಿ ಮಾಡಿಕೊಳ್ಳಲಾಗಿದ್ದು ಎಲ್ಲಾ ತರಬೇತಿಗಳಿಗೆ ರೂ. 2250 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ತರಬೇತಿಗೆ ಒಂದು ಘಂಟೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈಜು ಮತ್ತು ಸ್ಕೇಟಿಂಗ್ ತರಬೇತಿಗೆ ಆಗಮಿಸುವವರು ಕಡ್ಡಾಯವಾಗಿ ತರಬೇತಿ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು ಮತ್ತು ಟೆನ್ನಿಸ್ ತರಬೇತಿಗೆ ರಾಕೆಟ್ ಮತ್ತು ಬಾಲ್‌ಗಳನ್ನು ತರಬೇಕಾಗಿರುತ್ತದೆ.

ಮಾಹಿತಿಗೆ 9743820293, ಈಜು-7019475379, 6362200751, 9686419812, 9972333176, ಟೆನ್ನೀಸ್ 8374335635, ಸ್ಕೇಟಿಂಗ್ 7760921936 ಸಂಪರ್ಕಿಸುವಂತೆ ತಿಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ (ಪ್ರ) ರಾಜು ಆರ್, ಸ್ವಿಮ್ಮಿಂಗ್ ಕೋಚ್ ವಿಶ್ವಾಸ್, ಟೆನ್ನಿಸ್ ಕೋಚ್ ಸಂಗಮೇಶ್ ಸ್ಕೇಟಿಂಗ್ ಕೋಚ್ ರಮೇಶ್, ಮಂಜುನಾಥ, ಕೇರ್ ಟೇಕರ್ ಸಚಿನ್ ಹಾಗೂ ಸಿಬ್ಬಂದಿಗಳು ಇದ್ದರು.

Abhi

Abhi

Leave a Reply

Your email address will not be published. Required fields are marked *