ಶಿವಮೊಗ್ಗ:- ಸಮಾಜದಲ್ಲಿ ಅನಿಶ್ಚಿತ ಸಂದರ್ಭದಲ್ಲಿ ಕೆಲವು ಮಕ್ಕಳು ಅನಾಥರಾಗುತ್ತಾರೆ ಅವರನ್ನು ಗುರುತಿಸಿ ಸರಿದಾರಿಯಲ್ಲಿ ಮುಖ್ಯ ವಾಹಿನಿಗೆ ತರುವ ಜವಾಬ್ದಾರಿ ಎಲ್ಲಾ ಪ್ರಜ್ಞಾವಂತ ನಾಗರಿಕರ ಧರ್ಮ ಎಂದು ರೋಟರಿ ಶಿವಮೊಗ್ಗ ಜ್ಯುಬಿಲಿ ವತಿಯಿಂದ ’ತಾಯಿ ಮನೆಯಲ್ಲಿ ಹಮ್ಮಿಕೊಂಡಿದ್ದ ವಾರದ ಸಭೆಯಲ್ಲಿ ರೂಪಾ ಪುಣ್ಯಕೋಟಿ ಅವರು ಹೇಳಿದರು.
ಸ್ವಾರ್ಥಪೂರ್ಣ ಸಮಾಜದಲ್ಲಿ, ಕೆಲವು ಸ್ವಹಿತ ಮೀರಿದ ಸೇವೆಗೆ ತೊಡಗಿಕೊಂಡಿರುವವರಿಂದ ಕೆಲವು ಮಕ್ಕಳು ಉತ್ತಮ ಶಿಕ್ಷಣ ಹೊಂದಿ ಸಮಾಜದ ಏಳಿಗೆಗೆ ದುಡಿಯಲು ಸಹಕಾರಿಯಾಗಿದೆ ಎಂದರು.
ಮಾಜಿ ಅಧ್ಯಕ್ಷ ಎಸ್.ಎಸ್. ವಾಗೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನೊಂದ ಮಕ್ಕಳ ಕಷ್ಟಕ್ಕೆ ಮರುಗಿ, ಕೆಲವರ ಸಹಕಾರದಿಂದ 2009ರಲ್ಲಿ ಪ್ರಾಂಭಿಸಿದ ಈ ತಾಯಿ ಮನೆ ಇಂದು ಹಲವು ಸಂಘ ಸಂಸ್ಥೆಗಳ ಸಹಕಾರದಿಂದ, ಯಾವುದೇ ಪ್ರಚಾರಕ್ಕೆ ಒತ್ತು ಕೊಡದೆ ತಮ್ಮದೇ ಸಿದ್ದಾಂತದಿಂದ ಬೆಳೆದಿದೆ ಎಂದರು.
ತಾಯಿಮನೆ ಸ್ಥಾಪಕ ಸುದರ್ಶನ್ ಮಾತನಾಡುತ್ತಾ, ಕನಿಷ್ಟ ಸಹಕಾರವಿಲ್ಲದ ಮಕ್ಕಳ ಏಳಿಗೆಗೆ ಪಣತೊಟ್ಟು ಇಂದು 450 ಮಕ್ಕಳ ಜೀವನಕ್ಕೆ ದಾರಿ ದೀಪವಾಗಿರುವ ಹೆಮ್ಮೆ ನಮಗಿದೆ ಎಂದರು.
ನಮ್ಮಲ್ಲಿ ಬೆಳೆದ ಮಕ್ಕಳು ಐಎಎಸ್ ಇನ್ನೂ ಅನೇಕ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದಲು ಅನಾಸಕ್ತಿ ತೋರುವ ಮಕ್ಕಳಿಗೆ ಜೀವನೋಪಾಯಕ್ಕೆ ದುಡಿಯಲು ಎಲೆಕ್ಟ್ರಿಕಲ್, ಪ್ಲಂಬರ್ ಮುಂತಾದ ಕೈಕೆಲಸ ಕಲಿಸುತ್ತೇವೆ ಎಂದರು.
ಇಂದು ರೋಟರಿ ಜ್ಯೂಬಿಲಿ ಸದಸ್ಯರು ಮಕ್ಕಳಿಗೆ ದಿನ ನಿತ್ಯದ ಊಟಕ್ಕೆ ಅಗತ್ಯವಾದ ದಿನಸಿ ಸಾಮಗ್ರಿಗಳನ್ನು ನೀಡಿದ್ದು ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ರೇಣುಕಾರಾಧ್ಯ ಸ್ವಾಗತಿಸಿದರು ಸತ್ಯನಾರಾಯಣ್ ವಂದಿಸಿ ಡಾ.ಗುರುಪಾದಪ್ಪ ನಿರೂಪಿಸಿದರು.