google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಾಡಹಬ್ಬ ದಸರಾದಲ್ಲಿ ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ಆವರಣದಲ್ಲಿ ಆಹಾರ ದಸರಾ ಗೆ ಚಾಲನೆ ನೀಡ ಲಾಯಿತು. ಈ ಹಿನ್ನಲೆ ಶಿವಪ್ಪನಾಯಕ ಪ್ರತಿಮೆ ಬಳಿ ಇಡ್ಲಿ, ಬಾಳೆಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು.

ಇಡ್ಲಿ ತಿನ್ನುವ ಸ್ಪರ್ಧೆಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅರಣ್ಯ ಇಲಾಖೆ ನೌಕರರಿಗೆ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ನಡೆಯಿತು.

ಕೆಲವರು ಇಡ್ಲಿ ಸ್ಪರ್ಧೆಯಲ್ಲಿ ಗಬ ಗಬನೆ ತಿನ್ನುತ್ತ ನೆತ್ತಿಗೇರಿಸಿಕೊಂಡರು. ಕೆಲವರು ಸಾಂಬಾರ್ ಜೊತೆ ಇಡ್ಲಿ ತಿನ್ನಲಾಗದೆ ಹಾಗೆಯೇ ತಿನ್ನಲಾರಂಭಿಸಿ ದರು. ಸ್ಪರ್ಧೆಯಲ್ಲಿ ಸ್ಪರ್ಧಿಗಳು ಇಡ್ಲಿಯನ್ನು ತಿನ್ನುತ್ತಿದ್ದುದನ್ನು ನೋಡಿದರೆ ಬಕಾಸುರನ ಹಾಡು ನೆನಪಾಗುತ್ತಿತ್ತು.

ಮಹಿಳೆಯರಲ್ಲಿ ಘಟಾನು ಘಟಿಯರು ಸ್ಪರ್ಧಿಸಿ ಇವರೇ ಗೆಲ್ಲುತ್ತಾರೆ ಎಂದುಕೊಂಡಿದ್ದೆಲ್ಲ ಉಲ್ಟ ಆಗೋಯ್ತು. ಇಡ್ಲಿ ತಿನ್ನುವ ಸ್ಪರ್ಧೆ ಆರಂಭವಾಗು ತ್ತಿದ್ದಂತೆ ಅತ್ತ ನೋಡಿ ಇತ್ತ ನೋಡುವಷ್ಟರಲ್ಲಿ ಓರ್ವ ಮಹಿಳೆ ಕೇವಲ ಎರಡೇ ನಿಮಿಷದಲ್ಲಿ 10ಇಡ್ಲಿ ತಿಂದು ಜಯಬೇರಿ ಬಾರಿಸಿದ್ದಾರೆ.

ಅಣ್ಣಾನಗರದ ಶಿವಮ್ಮ ಎಂಬುವರೇ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯಾಗಿದ್ದಾರೆ. ಗೆದ್ದ ನಂತರ ಇವರ ನಾನು ಗೆಲ್ಲುತ್ತೇನೆ, ಅದರಲ್ಲೂ ಇಷ್ಟು ಬೇಗ 10ಇಡ್ಲಿ ತಿನ್ನುತ್ತೇನೆ ಅಂದು ಕೊಂಡಿರಲಿಲ್ಲ ಎಂದು ಪ್ರಥಮ ಬಹುಮಾನ ಪಡೆದು ಗೆಲುವಿನ ನಗೆ ಬೀರಿದರು.

ಇನ್ನೊಂದೆಡೆ ಪುರುಷರ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಾನಗರ ಪಾಲಿಕೆ ನೌಕರ ಪ್ರವೀಣ್ ಕುಮಾರ್ ಅವರು ಎರಡೇ ನಿಮಿಷದಲ್ಲಿ ಹನ್ನೊಂದುವರೆ ಇಡ್ಲಿ ತಿಂದು ಪ್ರಥಮ ಬಹುಮಾನ ಪಡೆದರು. ಅರಣ್ಯ ಇಲಾಖೆ ನೌಕರರ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಶಂಕರ ವಲಯ ನೌಕರ ಪ್ರಸನ್ನ ಕುಮಾರ್ ಅವರು 2ನಿಮಿಷದಲ್ಲಿ ೯ಬಾಳೆ ಹಣ್ಣು ತಿಂದು ಪ್ರಥಮ ಸ್ಥಾನ ಪಡೆದರು.

Leave a Reply

Your email address will not be published. Required fields are marked *