
ಶಿವಮೊಗ್ಗ :- ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದದ ವತಿಯಿಂದ ಜ. 10 ರ ಇಂದು ಸಂಜೆ ಹಾಗೂ ಜ. 11ರ ನಾಳೆ ಶಿರಸಿಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಿಷ್ಯವೃಂದದ ಮುಖ್ಯಸ್ಥರಾದ ಸತೀಶ್ ಹಯಗ್ರೀವ ಮತ್ತು ಓಂ ಗಣೇಶ್ ಶೇಟ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜ. 10ರ ಇಂದು ಸಂಜೆ ೪ಗಂಟೆಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದವರೆಗೆ ಪೂರ್ಣಕುಂಭ ಸಮೇತ ಚಂಡೆ ವಾದ್ಯಗಳೊಂದಿಗೆ ಶ್ರೀ ಗುರುಗಳನ್ನು ಮೆರವಣಿಗೆ ಮೂಲಕ ಕರೆತರಲಾಗುವುದು ಎಂದರಲ್ಲದೆ ಸಂಜೆ 7 ಗಂಟೆಗೆ ಶ್ರೀ ವಿಶ್ವವಲ್ಲಭ ಸ್ವಾಮೀಜಿಗಳಿಂದ ಶ್ರೀ ಗುರುರಾಯರ ಮಠದಲ್ಲಿ ಭೂತರಾಜರ ಪೂಜೆ ಇರುತ್ತದೆ. ಜ. 11ರ ನಾಳೆ ಬೆಳಿಗ್ಗೆ 7ಗಂಟೆಗೆ ಶ್ರೀ ವಿಶ್ವವಲ್ಲಭ ಗುರುಗಳಿಂದ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ನಡೆಯಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂದಿರದಲ್ಲಿ ಗುರುಗಳಿಗೆ ಸದ್ಭಕ್ತರಿಂದ ಸಾಮೂಹಿಕ ಪಾದಪೂಜೆ ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಾದಿರಾಜ ಶಿಷ್ಯ ವೃಂದದ ಸತೀಶ್ ಮಲ್ಡಿಂಗ್, ನಾಗರಾಜ ಸುಬ್ರಾಯ ಶೇಟ್, ರಾಜೇಶ್ ಸುಬ್ರಾಯ ಶೇಟ್, ಸತೀಶ್ ವೈಭವ್, ಸತೀಶ್ ಆರ್., ಪ್ರದೀಪ, ಕೇಶವ ಶೇಟ್, ಪ್ರಶಾಂತ್, ಮಂಜುನಾಥ ರಾಯ್ಕರ್, ರಾಘವೇಂದ್ರ ಶೇಟ್, ಸುಹಾಸ್, ನಾಗರಾಜ್, ಸುಹಾಸ್ ಶೇಟ್ ಪ್ರಮುಖರು ಹಾಜರಿದ್ದರು.