
ಶಿವಮೊಗ್ಗ :- ಬನದ ಹುಣ್ಣಿಮೆ ಜಾತ್ರಾ ಮಹೋತ್ಸವ ಪ್ರಯುಕ್ತ ಬಾಪೂಜಿ ನಗರದ ಆದಿಶಕ್ತಿ ಜಗನ್ಮಾತೆ ಶ್ರೀ ಮಾತಾ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಜ. 3ರ ನಾಳೆ ಬ್ರಹ್ಮ ರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಜನವರಿ 3ರಂದು ಬೆಳಗ್ಗೆ 6ಕ್ಕೆ ಅಮ್ಮನವರಿಗೆ 108 ಲೀಟರ್ ಹಾಲು, ಎಳನೀರು ಅಭಿಷೇಕ, ದುರ್ಗಾ ಹೋಮ, ಸುಹಾಸಿನಿ ಪೂಜೆ ನಂತರ ಅಮ್ಮನವರ ರಾಜಬೀದಿ ಉತ್ಸವ 10 ಗಂಟೆಯಿಂದ ಪ್ರಾರಂಭವಾಗಲಿದೆ. ಜ. 3ರ ನಾಳೆ ಬೆಳಗ್ಗೆ 10ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. 12:30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ಅನ್ನಸಂತರ್ಪಣೆ ಸೇವೆ ಇರಲಿದೆ.
ಜಾತ್ರಾ ಮಹೋತ್ಸವ ಮುನ್ನ ದಿನ ಜನವರಿ 2ರಂದು ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಲಿದೆ. ನಂತರ ಮಹಾಮಂಗಳಾರತಿ ಹಾಗೂ ಅನ್ನ ಸಂಪರ್ಪಣೆ ಸೇವೆ ಇರಲಿದೆ ಎಂದು ಶ್ರೀ ಬನಶಂಕರಿ ದೇವಸ್ಥಾನ ಅಧ್ಯಕ್ಷ ಬಿ.ಸತೀಶ್ ಕುಮಾರ್ ತಿಳಿಸಿದ್ದಾರೆ.
