ಶಿವಮೊಗ್ಗ :- ಮಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಯೂನಿ ವರ್ಸಿಟಿ, ನ್ಯಾಷನಲ್ ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯ 400 ಮೀ. ಮತ್ತು 4400ಅಥ್ಲೆಟಿಕ್ಸ್ ರಿಲೆಯಲ್ಲಿ ಶಿವಮೊಗ್ಗ ನಗರದ ಪೆಸಿಟ್ ಕಾಲೇ ಜಿನ ಎಂಬಿಎ ವಿದ್ಯಾರ್ಥಿ ಎಸ್. ಆಕಾಶ್ ಅವರು ಆಯ್ಕೆಯಾಗಿದ್ದಾರೆ.
ಈ ಪ್ರತಿಭಾನ್ವಿತ ನಗರದ ಗಾಂಧಿಬಜಾರಿನ ಶ್ರೀ ಕಾಳಿಕಾಪರಮೇಶ್ವರಿ ಸೊಸೈಟಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಎ. ಸತೀಶ್ ಆಚಾರ್ ಮತ್ತು ಸುನಿತಾ ದಂಪತಿಗಳ ಪುತ್ರರಾಗಿದ್ದಾರೆ. ಇವರು ನಾಗಾರ್ಜುನ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.