ಶಿವಮೊಗ್ಗ :- ಆರ್.ಎಂ.ಎಲ್. ನಗರದ ರಸ್ತೆಯಲ್ಲಿ ಮೊನ್ನೆ ರಾತ್ರಿ ಹರೀಶ್ ಅವರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಈ. ಕಾಂತೇಶ್ ನೇತೃತ್ವದಲ್ಲಿ ಮನವಿ ನೀಡಲಾಯಿತು.
ಅಮಾಯಕರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಹಲ್ಲೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಜೊತೆಗೆ ಗಾಂಜಾ ಹಾವಳಿ ಕೂಡ ಹೆಚ್ಚಾಗಿದೆ. ಇವರಿಗೆ ಹೇಳೋರು ಕೇಳೋರು ಇಲ್ಲದಂತಾಗಿ ಇವರು ಆಡಿದ್ದೇ ಆಟವಾಗಿದೆ ಇದಕ್ಕೆಲ್ಲ ರಕ್ಷಣ ಇಲಾಖೆಯು ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶ್ರೀಕಾಂತ್, ಬಾಲು, ಮೋಹನ್ ಜಗವ್, ಚನ್ನಬಸಪ್ಪ, ಮಣಿ, ಗುರು ಶೇಟ್, ಜಗದೀಶ್, ಕುಬೇರಪ್ಪ, ಶಂಕರ್ ನಾಯಕ್, ಪಾತ್ರೆ ಮಂಜಣ್ಣ, ರಾಜು, ಮುರುಗೇಶ್, ರಾಜು, ಚಿದಾನಂದ್, ಲತಾ ಶ್ರೀನಿವಾಸ್, ರಮೇಶ್ ಚಟ್ನಳ್ಳಿ, ಧರ್ಮರಾಜ್ ಮುಂತಾದವರು ಉಪಸ್ಥಿತರಿದ್ದರು.