
ಶಿವಮೊಗ್ಗ:- ಮಾಜಿ ಉಪಮುಖ್ಯಮಂತ್ರಿಗಳೂ ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರೂ ಆದ ಕೆ.ಎಸ್.ಈಶ್ವರಪ್ಪನವರ ನೇತೃತ್ವದಲ್ಲಿ ಗೋಮಾತೆಯ ಸಂರಕ್ಷಣೆಯ ವಿಶೇಷ ಚಿಂತನೆ ಯಿಂದ ಪ್ರಾರಂಭವಾಗುತ್ತಿರುವ ‘ಗೋವರ್ಧನ’ ಟ್ರಸ್ಟ್ ವತಿಯಿಂದ ಬಿಡಾಡಿ, ಮಾಲಿಕರಿಲ್ಲದ, ಅನಾರೋಗ್ಯ ಪೀಡಿತ, ಅಪಘಾತಕ್ಕೀಡಾದ, ವಯಸ್ಸಾದ ಹಾಗೂ ಬರಡು ಹಸುಗಳ ರಕ್ಷಣೆ ಮತ್ತು ಆರೈಕೆಗಾಗಿ ಹಲವು ಯೋಜನೆ ಗಳನ್ನು ಅಳವಡಿಸಿಕೊಂಡಿದೆ.
ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ, ಅಂಬುಲೆನ್ಸ್, ಈಗಾಗಲೇ ಅಸ್ತಿತ್ವದಲ್ಲಿರುವ ಗೋಶಾಲೆಗಳ ಅಭಿವೃದ್ಧಿಗೆ ಬೇಕಾದ ಸಹಾಯ ಹೀಗೆ ಹಲವು ಯೋಜನೆಗಳನ್ನು ‘ಗೋವರ್ಧನ’ ಟ್ರಸ್ಟ್ ಹೊಂದಿದೆ. ಇದರ ಅಂಗವಾಗಿ ಇಂದು ಗಾಜನೂರು ಡ್ಯಾಮ್ ಸಮೀಪ ಸಕ್ರೇಬೈಲ್‌ನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಯ ಆವರಣದಲ್ಲಿ ಗೋವುಗಳಿಗೆ ಆಹಾರಕ್ಕಾಗಿ ಮೇವು ಬೆಳೆಯುವ ಯೋಜನೆ ಮತ್ತು ಗೋಶಾಲೆಯ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖ ರಾದ ಶಿವಶಂಕರ್, ಉಮಾಪತಿ, ಯೋಗ ಗುರು ಸಿ.ವಿ. ರುದ್ರಾರಾಧ್ಯರು, ನಟರಾಜ್ ಭಾಗವತ್,ಉಮೇಶ್ ಆರಾಧ್ಯ, ಯುವ ನಾಯಕ ಕೆ.ಈ. ಕಾಂತೇಶ್, ಎಸ್.ಕೆ. ಶೇಷಾಚಲ,ಗುರುಗುಹ ನಾಗರಾಜ್, ನವ್ಯಶ್ರೀ ನಾಗೇಶ್, ಕುಬೇರಪ್ಪ, ಸತ್ಯಣ್ಣ, ಸೋಮಣ್ಣ, ಜಾದವ್, ವಿನೋದ್ ಹಾಗೂ ಜ್ಞಾನೇಶ್ವರಿ ಗೋಶಾಲೆಯ ಹಾಗೂ ಗೋವರ್ಧನ ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು.