
ಶಿವಮೊಗ್ಗ :- ಶಿವಮೊಗ್ಗ ಅಭಿವೃದ್ಧಿ ದತ್ತಿ ಸಂಸ್ಥೆ (ಎಸ್‌ಡಿಸಿಟಿ) ಯಿಂದ ನಿನ್ನೆ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿನ ಅನಾಥರಿಗೆ ರಗ್ಗು ಹಾಗೂ ಬೆಳಗಿನ ತಿಂಡಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅನಾಥರಿಗೆ ರಗ್‌ಗಳನ್ನು ವಿತರಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಹೆಚ್. ಸಿ. ಯೋಗೇಶ್, ಪ್ರಾರ್ಥನೆ ಮಾಡುವ ಕೈಗಳಿಗಿಂತ ಸೇವೆ ಮಾಡುವ ಕೈಗಳು ಸಮಾಜಕ್ಕೆ ಅಗತ್ಯ ಇದೆ, ಅನಾಥರಿಗೆ ನೆರವಾಗುವುದು ಸಹ ಒಂದು ಪುಣ್ಯದ ಕೆಲಸ, ಸೇವೆ ಸಹಾಯ ಮಾಡುವುದರಿಂದ ಬದುಕು ಸಾರ್ಥಕ ಗೊಳ್ಳುತ್ತದೆ ಎಂದರು.
ಶ್ರೀಮಂತ ಟ್ರಸ್ಟ್ ಗಳು ನೆರವಾಗು ವುದು ಸಹಜ ಆದರೆ ಬಡವರೆ ಟ್ರಸ್ಟ್ ರಚಿಸಿಕೊಂಡು ಬಡವರಿಗಾಗಿಯೇ ಸೇವೆ ಮಾಡವುದು ದೊಡ್ಡ ವಿಷಯ ಈ ನಿಟ್ಟಿನಲ್ಲಿ ಎಸ್ ಡಿಸಿಟಿ ಟ್ರಸ್ಟ್ ಅಧ್ಯಕ್ಷೆ ರೇಷ್ಮಾ ಅವರ ಕಾರ್ಯ ಬಹುದೊಡ್ಡದು ಎಂದರು.
ಟ್ರಷ್ಟ್‌ನ ನೂತನ ಅಧ್ಯಕ್ಷೆ ರೇಷ್ಮಾ ಮಾತನಾಡಿ ಸೇವೆಯನ್ನೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡು ಈ ಟ್ರಸ್ಟನ್ನು ರಚಿಸಲಾಗಿದೆ, ಮಳೆಗಾಲ ಚಳಿಗಾಲದಲ್ಲಿ ಬಸ್ಟ್ಯಾಂಡಿನಲ್ಲಿ ಅನಾಥರಾಗಿ ಚಳಿಯಲ್ಲಿ ನಡುಗುವುದನ್ನು ಕಂಡು ಅವರಿಗೆ ರಗ್ ನೀಡಲಾಗಿದೆ ಎಂದರು.
ನಮ್ಮ ಟ್ರಸ್ಟ್ ಮುಂದಿನ ದಿನಗಳಲ್ಲಿ ಶಿಕ್ಷಣ, ಧಾರ್ಮಿಕ, ಗ್ರಾಮೀಣ, ಅಭಿವೃದ್ಧಿ, ಕ್ರೀಡೆ, ಆರೋಗ್ಯ, ತರಬೇತಿ ರಾಷ್ಟ್ರೀಯತೆ, ಸಾಂಸ್ಕೃತಿಕ, ಹೀಗೆ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಸುನೀತ ಖಜಂಚಿ ಬೆನಕೆಶ್ ಸದಸ್ಯರಾದ ಸಲೀಮಾ, ಮಂಜುಳಾ, ಪ್ರಕಾಶ್, ಗಿರೀಶ್, ಮುಬಿನಾಱಮುಂತಾದವರಿದ್ದರು. ಸುಮಾರು 40ಕ್ಕೂ ಹೆಚ್ಚು ಜನರಿಗೆ ರಗ್‌ಗಳನ್ನು ನೀಡಲಾಯಿತು.