
ಶಿವಮೊಗ್ಗ :- ಇವತ್ತು ನೀವು ಬೀದಿ ನಾಯಿಗಳನ್ನು ನಿರ್ಮೂಲನೆ ಮಾಡದಿದ್ದರೆ ನಾಳೆ ನಿಮ್ಮ ಮನೆಯ ಪುಟ್ಟ ಮಕ್ಕಳೇ ನಾಯಿಗಳ ದಾಳಿಗೆ ಬಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ರೀತಿಯ ಸುದ್ದಿಗಳು ಈಗಾಗಲೆ ನೂರಾರು ಜಾಲ ತಾಣಗಳಲ್ಲಿ ಬಿಂಬಿತವಾಗಿವೆ. ಇದು ಸತ್ಯ ನಿತ್ಯ, ಬೆಂಗಳೂರಿನ ವ್ಯಾಪ್ತಿಯಲ್ಲಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿ ಕೈ ಕಾಲು ಬಾಯಿ ಕಚ್ಚಿ ಸಾವು ಬದುಕಿನ ನಡುವೆ ಹೋರಾಡು ವಂತಹ ದೃಶ್ಯಗಳನ್ನು ದಿನ ನಿತ್ಯ ಮಾಧ್ಯಮಗಳಲ್ಲಿ ನೋಡತ್ತಲೇ ಇದ್ದೀರ. ನಾಳೆ ಈ ವಿಷಯ ನಿಮ್ಮ ಮನೆಯ ಬುಡಕ್ಕೆ ಬಂದರೇನು ಅನುಮಾನವಿಲ್ಲ.

ಪುಟ ನೀನು ಹೊರಗಡೆ ಆಡ್ಕೋ ಹೋಗು ಅಂತ ಕಳಿಸುವುದಷ್ಟೇ ಗೊತ್ತಿರೋ ಪೋಷಕರಿಗೆ ಹೊರಗಿನ ವಾತಾವರಣ ಏನೂ ಅಂತ ಸ್ವಲ್ಪವೂ ಗೊತ್ತಾಗುವುದಿಲ್ಲ. ಅಂದು ಇಡೀ ದಿನ ಹೊರಗಡೆ ಆಟವಾಡುತ್ತಿದ್ದ ಮಕ್ಕಳಿಗೆ ಏನೂ ಭಯ ಬೀತಿ ಇರಲಿಲ್ಲ. ಆಗ ನಾಯಿಗಳ ಸಂಖ್ಯೆ ಬೆರಳೇಣಿಕೆಯಷ್ಟಿತ್ತು ಅಷ್ಟೆ. ಜೊತೆಗೆ ಅಂದಿನ ನಗರಸಭೆಯ ತೀರ್ಮಾನಗಳು ಅಚಲಿತವಾಗಿದ್ದವು, ಆಗ ಯಾರ ಹಂಗಿಲ್ಲದೇ ನಾಯಿಗಳಿಗೆ ಚುಚ್ಚು ಮದ್ದು ನೀಡಿ ನಿರ್ಮೂಲನೆ ಮಾಡಲಾಗುತ್ತಿತ್ತು. ನಂತರ ಅವುಗಳನ್ನು ತೋಟ ಗದ್ದೆಗಳಲ್ಲಿ ಊಳಲಾಗುತ್ತಿತ್ತು. ಆದರೀಗ ಬೀದಿ ನಾಯಿಗಳ ಸಂತತಿ ನಿರ್ಮೂಲನೆಗೆ ಅಡ್ಡಿ ಆತಂಕಗಳು ಹೆಚ್ಚಾಗುತ್ತಿವೆ.

ಹಿಂದಿನಂತೆ ನಾಯಿಗಳಿಗೆ ಚುಚ್ಚು ಮದ್ದು ನೀಡಿ ನಿರ್ಮೂಲನೆ ಮಾಡಲು ವಿರೋಧಗಳು ವ್ಯಕ್ತವಾದವು, ನಂತರ ಇತ್ತೀಚಿನ ದಿನಗಳಲ್ಲಿ ಸಂತಾನಹರಣ ಮಾಡಿ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಟೆಂಡರ್‌ಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ನೀಡಲಾಯಿತು. ಇದು ಅಷ್ಟರ ಮಟ್ಟಿಗೆ ಯಶಸ್ವಿಯಾಗಲಿಲ್ಲ. ದಿನ ಕಳೆದಂತೆ ನಾಯಿಗಳ ಸಂಖ್ಯೆ ವಿಪರೀತವಾಗತೊಡಗಿತು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಂದಿಡಿದು ರಸ್ತೆಯಲ್ಲಿ ಆಟವಾಡುವ ಮಕ್ಕಳ ಮೇಲೆ ದಾಳಿ ನಡೆಸಿ ಗಂಭೀರ ಸ್ವರೂಪದ ಗಾಯಗೊಳಿಸಿರುವ ಘಟನೆಗಳು ನಡೆಯುತ್ತಲೇ ಇವೆ. ಒಂದೊಂದು ಬಡಾವಣೆಗಳಲ್ಲೂ 40ರಿಂದ 50 ನಾಯಿಗಳನ್ನು ಕಣ್ಣಾರೆ ಕಾಣಬಹುದು. ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಪ್ರತೀ ದಿನ ಹೆಚ್ಚಾಗುತ್ತಿದೆ.
ಜೊತೆಗೆ ಬೀದಿ ನಾಯಿಗಳಿಗೆ ಬಿಸ್ಕೇಟ್ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಬಿಸ್ಕೇಟ್ ಹಾಕಿ ರೀಲ್ಸ್ ಬೇರೆ ಮಾಡುವ ಚಾಳಿ ಹೆಚ್ಚಾಗುತ್ತಿವೆ. ಸಾರ್ವಜನಿಕರೇ ಇದಕ್ಕೆಲ್ಲ ಒಂದು ಅಂತ್ಯ ಹಾಡಿ ನಾಳೆ ನಿಮ್ಮ ಮನೆಯ ಮಕ್ಕಳು ಬೈಸಿಕಲಲ್ಲಿ ಅಥವಾ ನಡೆದು ಹೋಗುವಾಗ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ನಲುಗುವ ಪರಿಸ್ಥಿತಿ ಎದುರಾಗದಂತೆ ತಡೆಯಲು ಇಂದಿ ನಿಂದಲೇ ಅವುಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯೊಂದಿಗೆ ಕೈ ಜೋಡಿಸಿ.
ಶಿವಮೊಗ್ಗ ನಗರದ ಪ್ರಮುಖ ಬಡಾವಣೆಗಳಾದ ದುರ್ಗಿಗುಡಿ, ಗೋಪಾಳ, ಅಪ್ಪಾಜಿ ರಾವ್ ಕಾಂಪೌಂಡ್, ಜೈಲ್ ರಸ್ತೆ, ಫ್ರೀಡಂ ಪಾರ್ಕ್ ಮಾಂಸದಂಗಡಿಗಳ ಸಮೀಪ, ಬಸ್ ಸ್ಯಾಂಡ್, ವಿನೋಬನಗರದ ಇಕ್ಕೆಲಗಳು, ಬೈಪಾಸ್, ಲಷ್ಕರ್ ಮೊಹಲ್ಲ, ಅಶೋಕ ರಸ್ತೆ, ಜಯನಗರ, ಬಸವನಗುಡಿ ಈಗೆ ಹತ್ತು ಹಲವು ಬಡಾವಣೆಗಳಲ್ಲಿ ಓಡಾಡುವ ನಾಯಿಗಳು ಹೆಚ್ಚಿದ್ದು, ಇವುಗಳ ನಿರ್ಮೂಲನೆಗೆ ಮಹಾನಗರ ಪಾಲಿಕೆ ಆಯುಕ್ತರು ಸೂಕ್ರ ಕ್ರಮ ಜರುಗಿಸಬೇಕಾಗಿದೆ ಎಂದು ಆಯಾ ಬಡಾವಣೆಯ ನಾಗರೀಕರು ದೂರಿದ್ದಾರೆ.