
ಶಿವಮೊಗ್ಗ :- ಸ್ಪರ್ಧಾತ್ಮಕ ಯುಗದಲ್ಲಿ ಹೋಟೆಲ್ ಮಾಲೀಕರು ಕೂಡ ಬದಲಾವಣೆಗೆ ಹೊಂದಿಕೊಳ್ಳುವ ಅನಿವಾರ್ಯತೆ ಇದೆ ಎಂದು ಕೆಎಸ್‌ಎಚ್‌ಎ ಅಧ್ಯಕ್ಷ ಜಿ.ಕೆ. ಶೆಟ್ಟಿ ಅಭಿಪ್ರಾಯಿಸಿದರು.
ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಹೋಟೆಲ್ ಓನರ್‍ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಕೆಎಸ್‌ಎಚ್‌ಎ ಸಹಕಾರದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳು ವಿಷಯ ಕುರಿತು ವಿಶೇಷ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈಗ ಹೋಟೆಲ್ ಮಾಲೀಕರು ಎರಡು ರೀತಿ ಹೋರಾಟ ನಡೆಸಬೇಕಿದೆ. ಹಿಂದೆ 1970 ರ ಸುಮಾರಿಗೆ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಈಗ ಕೆಲಸಗಾರರು ಮತ್ತು ಸರ್ಕಾರದ ಸಮಸ್ಯೆ. ಹೊಸ ಕಾನೂನು ಬರುತ್ತಿವೆ. ಅದನ್ನು ತಪ್ಪಿಸಿಕೊಳ್ಳಲು ಹೋರಾಟ ನಡೆಸುವಂತೆ ಆಗಿದೆ ಎಂದರು.
ಹೋಟೆಲ್ ಉದ್ಯಮದ ತರಬೇತಿ ಅಗತ್ಯ ಇದೆ. ಬದಲಾವಣೆ ಕಾಲದಲ್ಲಿ ಇದ್ದೇವೆ. ಹಿಂದೆ ಕೆಲಸ ಅನಿವಾರ್ಯ ಆಗಿತ್ತು. ಈಗ ಕಂಫರ್ಟ್ ಇದ್ದರೆ ಮಾತ್ರ ಕಾರ್ಮಿಕರು ಕೆಲಸ ಮಾಡುತ್ತಾರೆ. ಕೆಲಸಗಾರರ ಉಳಿಸಿಕೊಳ್ಳುವ ಸವಾಲುಗಳು ಎದುರಾಗಿವೆ. ಹಿಂದೆ ಎಸಿ ಇರಲಿಲ್ಲ. ಈಗ ಅಳವಡಿಕೆ ಮಾಡಬೇಕು. ಬದಲಾವಣೆ ತಕ್ಕ ವಿನ್ಯಾಸವನ್ನು ಹೋಟೆಲ್‌ಗಳಲ್ಲಿ ಮಾಡಬೇಕು. ಈಗ ಜನ ಯೋಚನೆ ಮಾಡುತ್ತಾರೆ. ಆಹಾರದ ದರಕ್ಕಿಂತ ಸಹಜ ಆಹಾರ ಹುಡುಕುತ್ತಾರೆ. ಮೂರು ಗಂಟೆಗಳ ನಂತರ ಹಸಿವು ಆಗುವ ಹೋಟೆಲ್ ನೋಡುತ್ತಾರೆ ಎಂದರು.
ಬಿಬಿಹೆಚ್‌ಎ ಗೌರವ ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ಕಣ್ಣು ಮುಚ್ಚಿಕೊಂಡು ಉದ್ಯಮ ನಡೆಸಬಾರದು. ಮೊದಲು ಕಟ್ಟಡ ಮಾಲೀಕರ ಬಗ್ಗೆ ಮಾಹಿತಿ ಪಡೆಯಬೇಕು. ಕಟ್ಟಡದ ಮಾಲೀಕರ ಸಮಸ್ಯೆಯಿಂದ ಬೆಂಗಳೂರಿನಲ್ಲಿ 125 ಹೋಟೆಲ್ ಮುಚ್ಚಿzರೆ. ಕೆಲಸಗಾರರ ಆಧಾರ ಕಾರ್ಡ್ ಮಾಹಿತಿ ಪಡೆಯಬೇಕು. ಕಾರ್ಮಿಕರ ಮತ್ತು ಅವರ ನಡವಳಿಕೆ ಸಮಸ್ಯೆ ಇದೆ. ಕಾರ್ಮಿಕರ ಮಾಹಿತಿ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದರು.
ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಎನ್. ಗೋಪಿನಾಥ್ ಪ್ರಸ್ತಾವಿಕ ಮಾತನಾಡಿ, ನಮ್ಮ ಮೆನು ಮೂಲಕ ಹೋಟೆಲ್ ಆರಂಭ. ಲಾಭದ ಬಗ್ಗೆ ಯೋಚನೆ. ಹಿಂದೆ ತಂದೆ, ಚಿಕ್ಕಪ್ಪ ಹನ್ನೆರಡನೇ ವಯಸ್ಸಿಗೆ ಹೋಟೆಲ್ ಕೆಲಸ ಪ್ರಾರಂಭ ಮಾಡಿದ್ದರು. ಆಗ ಬಾಲ ಕಾರ್ಮಿಕ ಕಾಯಿದೆ ಇರಲಿಲ್ಲ. ಈಗ ಕಾಯಿದೆ ಪಾಲನೆ ಮಾಡಬೇಕು. ಪ್ರವಾಸೋದ್ಯಮ ಬೆಳವಣಿಗೆ ಬಗ್ಗೆ ಕೇವಲ ಮಾತುಗಳು ಇವೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ಅದಕ್ಕೆ ಪರಿಹಾರ ದಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಬಿಬಿಹೆಚ್‌ಎ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಬಿಬಿಹೆಚ್‌ಎ ಕಾರ್ಯದರ್ಶಿ ವೀರೇಂದ್ರ ಕಾಮತ್ ಮಾತನಾಡಿದರು. ಬೆಂಗಳೂರಿನ ಗೋಪಾಡಿ ಶ್ರೀನಿವಾಸ ರಾಯ, ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಶಂಕರ ನಾರಾಯಣ ಹೊಳ್ಳ, ಕುವೆಂಪು ವಿವಿ ಉಪನ್ಯಾಸಕ ಶ್ರೀಕಾಂತ್ ಇದ್ದರು. ಲಕ್ಷ್ಮೀದೇವಿ ಗೋಪಿನಾಥ್ ನಿರೂಪಿಸಿದರು.
