ಶಿವಮೊಗ್ಗ :- ಶ್ರೀ ರಾಘವೇಂದ್ರ ಯೋಗ ಕೇಂದ್ರ ಮತ್ತು ಶ್ರೀ ಪತಂಜಲಿ ಯೋಗ ಸಮಿತಿಯಿಂದ ಇಂದು ಸೂರ್ಯ ಜಯಂತಿ ಪ್ರಯುಕ್ತ ೧೦೮ ಸೂರ್ಯ ನಮಸ್ಕಾರ ಯಜ್ಞವನ್ನು ಶ್ರೀ ನಿಜಲಿಂಗಪ್ಪ ಸಭಾ ಭವನದಲ್ಲಿ ಬೆಳಿಗ್ಗೆ 5.30ಕ್ಕೆ ರಮೇಶ್ ಭಟ್ ರಿಂದ ಪೂಜಾ ಕೈಂಕರ್ಯದೊಂದಿಗೆ ನಡೆಯಿತು.

ಬಿಜಾಕ್ಷರ ಸಹಿತ ಮಂತ್ರದೊಂದಿಗೆ 108 ಸೂರ್ಯ ನಮಸ್ಕಾರವನ್ನು ಮಕ್ಕಳು, ಮಹಿಳೆ ಯರು ಪುರುಷರು 80 ವೃದ್ಧರು ಮಾಡಿ ದೈಹಿಕವಾಗಿ, ಮಾನಸಿಕವಾಗಿ ಸದೃಢರಾದ ಧನ್ಯತೆ ಪಡೆದು ಅನುಭವ ವನ್ನು ಹಂಚಿಕೊಂಡರು. ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಮಕ್ಕಳಿಗೆ ನೆನಪಿನ ಶಕ್ತಿಯನ್ನು ಹೆಚ್ಚಾಗಿ ಮಾಡುತ್ತದೆ ಮತ್ತು ನವ ಚೈತನ್ಯ ಸಿಗುತ್ತದೆ ವಿಟಮಿನ್ ಡಿ ಹೆಚ್ಚು ಪಡೆದು ಮೂಳೆ ಗಳು ಸದೃಢ ವಾಗುತ್ತದೆ, ಚರ್ಮ ವ್ಯಾದಿಗಳು ದೂರವಾಗುತ್ತದೆ ಎಂದು ಶಶಿ ಮಳಿ ತಿಳಿಸಿದರು.
ಕೇಂದ್ರದ ಹಿರಿಯ ಯೋಗ ಪಟು ನಿಶಾಂತ್ ಆಸನಗಳ ಮಾರ್ಗದರ್ಶನ ಮಾಡಿದರು. ಕಲಾವಿದ ಕೆ.ವಿ. ಮುರಳಿ ಧರ ಮಂಡಲದ ವಿನ್ಯಾಸ ಮಾಡಿ ಗಮನ ಸೆಳೆದರು. ಶ್ರೀ ರಾಘ ವೇಂದ್ರ ಯೋಗ ಕೇಂದ್ರದ ಸಂಸ್ಥಾಪಕ ಯೋಗ ಸಾಮ್ರಾಟ್ ಗೋಪಾಲಕೃಷ್ಣ ಮತ್ತು ಪತಂಜಲಿ ಕೇಂದ್ರದ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿತು. ನಂತರ ಯೋಗ ಬಂಧುಗಳಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
