ಬಂಗಾರಮಕ್ಕಿ :-ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ ಶ್ರೀಕ್ಷೇತ್ರ ಬಂಗಾರಮಕ್ಕಿ ಇದರ ಆಡಳಿತಕ್ಕೊಳಪಟ್ಟಿರುವ ಹೊನ್ನಾವರ ದುರ್ಗಾಕೇರಿಯ ಶ್ರೀ ದತ್ತ ಮಂದಿರದಲ್ಲಿ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಡಿ. 14 ಮತ್ತು 15ರಂದು ಶ್ರೀ ದತ್ತ ಜಯಂತ್ಯುತ್ಸವ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಡಿ. 14ರಂದು ಸಂಜೆ ೬.೩೦ಕ್ಕೆ ತೊಟ್ಟಿಲೋತ್ಸವ ಹಾಗೂ ಈ ಎರಡೂ ದಿನಗಳಂದು ಮಧ್ಯಾಹ್ನ 1ಗಂಟೆಯಿಂದ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ. ಏ. 1ರಿಂದ 12ರವರೆಗೆ ಮಹಾ ಕುಂಭ ಶ್ರೀ ಕ್ಷೇತ್ರದಲ್ಲಿ ಏ. 1ರಿಂದ 12ರವರೆಗೆ ಶ್ರೀ ವೀರಾಂಜನೇಯ ದೇವರ ಜೀರ್ಣಾಷ್ಟಬಂಧ ಪ್ರತಿಷ್ಟೆ, ನೂತನ ಶಿಖರ ಸ್ವರ್ಣ ಕಳಶ, ಸುಬ್ರಹ್ಮಣ್ಯ ನಾಗಬನ ಪೂಜೆ, ಚೌಡೇಶ್ವರಿ ಅಮ್ಮನವರು ಹಾಗೂ ಪರಿವಾರ ದೇವತೆಗಳ ಪ್ರತಿಷ್ಟಾಪನೆ, ಶ್ರೀ ಮಾರುತಿ ಗುರೂಜಿಯವರ ಪೀಠಾರೋಹಣ ರಜತ ಮಹೋತ್ಸವ, ಸಂಸ್ಕತಿ ಕುಂಭ – ಮಲೆನಾಡು ಉತ್ಸವ ಹಾಗೂ ಶ್ರೀ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.
ಪೂರ್ವಭಾವೀ ಸಭೆ
ಈ ಎಲ್ಲಾ ಕಾರ್ಯಕ್ರಮಗಳ ಆಯೋಜನೆಯ ಕುರಿತಾಗಿ ಸಮಾಲೋಚಿಸಲು ಡಿ. 16 ರಿಂದ 19 ರವರೆಗೆ ನಿತ್ಯ ಬೆಳಿಗ್ಗೆ 9 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಹಾಗೂ ಡಿ. 20 ರಿಂದ 23 ಮಧ್ಯಾಹ್ನ 3 ರಿಂದ 5ರವರೆಗೆ ಹಾಗೂ ರಾತ್ರಿ 8.30 ರಿಂದ 10ರ ವರೆಗೆ ಭಕ್ತಾದಿಗಳ ಸಭೆ ಕರೆಯಲಾಗಿದೆ.
ಭಕ್ತಾದಿಗಳು ವೈಯಕ್ತಿಕವಾಗಿ ಅಥವಾ ತಮ್ಮ ಗ್ರಾಮ,ತಾಲೂಕು, ಜಿಲ್ಲೆಯ ತಂಡದೊಂದಿಗೆ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ, ಸಹಕರಿಸಬೇಕಾಗಿ ಶ್ರೀಕ್ಷೇತ್ರದ ಆಡಳಿತಾಧಿಕಾರಿಗಳು ಕೋರಿದ್ದಾರೆ.