
ಶಿವಮೊಗ್ಗ :- ಕ್ರೀಡೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಖ್ಯಾ ನಾಯ್ಕ್ ತಿಳಿಸಿದರು.
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲಾ ಆವರಣದಲ್ಲಿ ಸಮ್ಮಿಲನ 2.೦ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಪಾಠ ಎಷ್ಟು ಮುಖ್ಯವೋ ದೈಹಿಕ ಹಾಗೂ ಮಾನಸಿಕವಾಗಿ ಸಧೃಡರಾಗಲು ಕ್ರೀಡೆಗಳಲ್ಲಿ ಭಾಗಿಯಾಗುವುದೂ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಕ್ರೀಡಾ ಚಟುವಟಿಕೆಗಳು ಯುವ ಶಕ್ತಿಗೊಂದು ಪ್ರೇರಣೆಯಾಗಿದೆ. ಈ ಮೂಲಕ ಆರೋಗ್ಯ ಹಾಗೂ ಉಲ್ಲಾಸಭರಿತ ವಾತಾವರಣದ ಬದುಕನ್ನು ಸೃಷ್ಠಿ ಮಾಡಿಕೊಂಡು ಓದಿನಲ್ಲೂ ಉತ್ತಮ ಸಾಧನೆ ಮಾಡಿ, ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂತೋಷ್ ನಾಯ್ಕ್, ಅನಿತಾ ಜಿ.ವಿ., ಸಂಸ್ಥೆಯ ಸುಮಂತ್, ವಿಜಯ ಕುಮಾರ್ ಹಾಗೂ ಶಿಕ್ಷಕಿಯರು, ಸಿಬ್ಬಂಧಿಯವರು ಪಾಲ್ಗೊಂಡಿದ್ದರು.