ಶಿವಮೊಗ್ಗ :- ವಿನೋಬನಗರ ಎಪಿಎಂಸಿ ಎದುರು ಅಪೊಲೊ ಮೆಡಿಕಲ್ ಶಾಪ್ ಮುಂಭಾಗ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ.
ಅರುಣ್ (26) ಕೊಲೆಯಾಗಿರುವ ಯುವಕನೆಂದು ಗುರುತಿಸಲಾಗಿದೆ. ಘಟನೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ. ಆತನ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಗಿದೆ.
ವೈವಾಹಿಕ ವಿವಾದವೇ ಹತ್ಯೆಗೆ ಕಾರಣವಿರಬುದೆಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
