ಶಿವಮೊಗ್ಗ :- ತಾಯಿ ಮಡಿಲು ಅನಾಥಾಶ್ರಮ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ತಾಯಿಮಡಿಲು ಅನಾಥಾಶ್ರಮ ಗುದ್ದಲಿಪೂಜೆ ಸಮಾರಂಭವನ್ನು ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ ರಸ್ತೆಯ ಅಗಸವಳ್ಳಿ ದಿಬ್ಬದಲ್ಲಿ ಡಿ. 28ರ ಬೆಳಿಗ್ಗೆ 11ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕ ಸರ್ವರ್ ಅಹಮದ್ (ಸೈಯದ್) ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಲಾ ಎಂಬುವವರು ಉಚಿತವಾಗಿ ನೀಡಿರುವ 2040 ಅಳತೆಯ ನಿವೇಶನದಲ್ಲಿ ಅನಾಥರು, ಅಂಗವಿಕಲರು ಹೀಗೆ ಆಶ್ರಯ ನೀಡುವ ಉದ್ದೇಶವಿದೆ ಎಂದರು.
ಗ್ರಾಮಾಂತರ ಶಾಸಕಿ ಶಾರದಾಪೂರ್‍ಯನಾಯ್ಕ್ ಗುದ್ದಲಿಪೂಜೆಯನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ. ಧನಂಜಯಸರ್ಜಿ, ಬಲ್ಕೀಷ್‌ಬಾನು, ಸೂಡಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾರಕ್ಷಣಾಧಿಕಾರಿ ಮಿಥುನ್‌ಕುಮಾರ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗೌಸ್‌ಪೀರ್, ಪಲ್ಲವಿ, ರೆಹಮತ್, ಫೈರೋಜ್, ನೀಲ್‌ರಾಜ್, ನೀಲಾ, ಪಾರ್ವತಿ ಮೊದಲಾದವರಿದ್ದರು.