
ಶಿವಮೊಗ್ಗ :- ರಾಜ್ಯದ ಸುಮಾರು ಆರು ಲಕ್ಷ ಸರ್ಕಾರಿ ನೌಕರರಿಗೆ 2026ನೇ ಸಾಲಿನ ಕ್ಯಾಲೆಂಡರ್ನ್ನು ಸಂಘದಿಂದ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಸಂಘದ ೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಕ್ಯಾಲೆಂಡರ್ನ್ನು ನೌಕರರಿಗೆ ವಿತರಿಸುತ್ತಿರುವುದು ದೇಶದಲ್ಲೇ ಪ್ರಥಮವಾಗಿದೆ. ಗುಣಮಟ್ಟದ ಕ್ಯಾಲೆಂಡರ್ನ್ನು ವಿತರಣೆ ಮಾಡುತ್ತಿರುವುದು ಇದು 2ನೇ ವರ್ಷದ್ದಾಗಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ನೌಕರರಿಗೆ ಪ್ರತೀ ವರ್ಷ ಕ್ಯಾಲೆಂಡರ್ನ್ನು ನೀಡಲಾಗುವುದು ಎಂದು ಭರವಸೆ ನೀಡಿದಂತೆ ಕ್ಯಾಲೆಂಡರ್ನ್ನು ವಿತರಿಸಲಾಗುತ್ತಿದೆ. ಶೀಘ್ರದಲ್ಲೇ ರಾಜ್ಯದ ಎಲ್ಲಾ ನೌಕರರಿಗೆ ಕ್ಯಾಲೆಂಡರ್ ತಲುಪಿಸಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಪಾಪಣ್ಣ ಮೊದಲಾದವರಿದ್ದರು.