ಶಿವಮೊಗ್ಗ :- ವಿದ್ಯಾನಗರ ವಾರ್ಡ್ ನಂ.೩೪ರಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸ್ಮಾರ್ಟ್‌ಸಿಟಿ ಅನುದಾನ ಸಮರ್ಪಕವಾಗಿ ಬಳಕೆಯಾಗಿ ಕೂಡಲೇ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆಯ ಸಂಸ್ಥಾಪಕ ಹಾಗೂ ರಾಜಧ್ಯಕ್ಷ ಎಂ. ಸಮೀವುಲ್ಲಾ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಾರ್ಡ್ ನಂ. 34ರಲ್ಲಿನ ವಾದಿ-ಇ-ಹುದಾ, ಮಹಬೂಬ್ ನಗರ, ಮದಾರಿಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ೫೦ ವರ್ಷಗಳಿಂದ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ. ಇಲ್ಲಿನ ನಿವಾಸಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯು ಕಾರ್ಯಗತವಾಗಿಲ್ಲ. ಈ ವಾರ್ಡ್ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಮನವಿದಾರರು ತಿಳಿಸಿದರು.
ಎಲ್ಲಾ ಕೇರಿಗಳಲ್ಲಿ ಬೀದಿ ದೀಪಗಳ ಹಾಕಿಸಬೇಕು. ಶಾಸಕರ ಅನುದಾನದಲ್ಲಿ ಸೋಲಾರ್‌ಲೈಟ್ ಕಂಬ ಅಳವಡಿಸಬೇಕು. ಯುಜಿಡಿ ಕಾಮಗಾರಿ ಕೂಡಲೇ ಆರಂಭಿಸಬೇಕು. ಚರಂಡಿಗಳಲ್ಲಿ ಕೆಟ್ಟವಾಸನೆ ತುಂಬಿದ್ದು ಸ್ವಚ್ಛಗೊಳಿಸಬೇಕು. ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಹಂದಿ, ನಾಯಿಗಳ ನಿಯಂತ್ರಿಸಬೇಕು. ಕುಡಿಯುವ ನೀರಿನ ಪೂರೈಕೆಯಾಗಬೇಕು ಹೊಸ ಪೈಪ್‌ಲೈನ್ ಮೀಟರ್‌ಗಳನ್ನು ನಿವಾಸಿಗಳ ಗಮನಕ್ಕೆ ತಾರದೇ ಅಳವಡಿಸಲಾಗಿತ್ತು. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.
ಶಾಸಕರುಗಳ, ಸಂಸದರ ಅನುದಾನದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಇದು ಹಳೆಯ ವಾರ್ಡ್ ಆಗಿರುವುದರಿಂದ ಹೆಚ್ಚಿನ ಆದ್ಯತೆ ನೀಡಬೇಕು, ಮಹಾನಗರ ಪಾಲಿಕೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಾರ್ಡ್‌ಗಳಲ್ಲಿ ಪರಿವರ್ತಿಸಿ ಶಿವಮೊಗ್ಗ ನಗರವನ್ನು ಹೆಚ್ಚಿನ ಅಭಿವೃದ್ಧಿಗೆ ಕೊಂಡೊಯ್ಯಬೇಕು, ಸ್ಮಾರ್ಟ್‌ಸಿಟಿ ಅನುದಾನದ ಕೊರತೆ ಈ ವಾರ್ಡಿಗಿದ್ದು, ಕೂಡಲೇ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ-ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸೂಳೆಬೈಲ್ ಸರ್ಕಲ್‌ವರೆಗೆ ದಾರಿದೀಪಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಕತ್ತಲಿನಲ್ಲೇ ಓಡಾಡುವಂತೆ ಆಗಿದೆ. ಹಾಗಾಗಿ ಕಳ್ಳರಕಾಟ ಹೆಚ್ಚಾಗಿದೆ. ಕೂಡಲೇ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಮನವಿದಾರರು ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ಮಹಮದ್ ಯೂಸಫ್, ಕೆ.ಬಿ. ಇಬ್ರಾಹಿಂ, ಸೂಫಿಮಲಾನ, ಮಹಮದ್ ಅನೀಫ್, ಮಹಮದ್ ಗೌಸ್‌ಖಾನ್, ವಾಹಬ್‌ಸಾಬ್, ಸಫೀಬೇಗ್, ಅಬ್ದುಲ್‌ರಹೀಂ, ಜಫ್ರುಲ್ಲಾಖಾನ್, ರಫೀಕ್ ಅಹ್ಮದ್, ಇಸ್ರಾದ್ ಅಹ್ಮದ್, ಅಸ್ಲಂಪಾಷಾ, ಸಾಹಿದ್‌ವಾಹಿದ್, ಸೋಹಲ್‌ಖಾನ್, ನಸ್ರುಲ್ಲಾ ಸೇರಿದಂತೆ ಹಲವರಿದ್ದರು.