google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸಮಕಾಲಿನ ಸಂದರ್ಭಕ್ಕೆ ಅನುಗುಣವಾಗಿ ಆಳವಾದ ಅಧ್ಯಯನದ ಮೂಲಕ ನಿಜವಾದ ವೈಜನಿಕ ವೈಚಾರಿಕ ಪ್ರeಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎ.ವಿ ಸಭಾಂಗಣದಲ್ಲಿ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ವರ್ತಮಾನದ ವೈಚಾರಿಕ ಪ್ರe ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಾವು ತಪ್ಪಿನ ವಿರುದ್ದ ಹೋರಾಟ ಮಾಡಬೇಕಿದೆ ಮನುಷ್ಯನ ವಿಕಸನದ ಜೊತೆಗೆ ಮಡ್ಯತೆ ಎಂಬುದು ಬಂದಿದೆ. ಆವಿಷ್ಕಾರವೆಂಬ ಏಣಿಯ ತುತ್ತ ತುದಿ ಯಲ್ಲಿದ್ದರೂ, ಮನುಷ್ಯನಲ್ಲಿ ಭಯ ಹೋಗಿಲ್ಲ. ಭಯವೇ ಅಂಧಶ್ರದ್ದೆಯ ಮೂಲ ಕಾರಣ ಎಂದರು.

ಹಿರಿಯ ಸಾಹಿತಿ ಡಾ. ಹೆಚ್.ಟಿ. ಕೃಷ್ಣಮೂರ್ತಿ ಮಾತನಾಡಿ, ಪ್ರಕೃತಿ ಯನ್ನು ಸರಿಯಾಗಿ ಅರ್ಥಮಾಡಿ ಕೊಂಡರೆ ಸಾಕು, ಅದಕ್ಕಿಂತ ದೊಡ್ಡ ವೈಚಾರಿಕ ಚಿಂತನೆ ಮತ್ತೊಂದಿಲ್ಲ. ಅಂತಹ ವಿಸ್ಮಯತೆಯನ್ನು ಅರಿಯುವ ಬದಲಿಗೆ, ಮಢ್ಯಗಳು ನಮ್ಮನ್ನು ಆಳುವಂತೆ ಮಾಡಿಕೊಳ್ಳು ತ್ತಿದ್ದೇವೆ ಎಂದರು.

ಇಂದು ವಿಶ್ವವಿದ್ಯಾಲಯ, ಪುಸ್ತಕಗಳು ನೀಡುವ ವಿಚಾರಗಳನ್ನು ನಂಬುವುದಕ್ಕಿಂತ, ವಾಟ್ಸ್ ಆಪ್ ವಿವಿಯ ವಿಚಾರಗಳನ್ನು ಅತಿ ಹೆಚ್ಚು ನಂಬುತ್ತಿದ್ದೇವೆ ಎಂದ ಅವರು, ಲಕ್ಷಾಂತರ ಪದವೀಧರರಾಗಿ ಹೊರ ಹೊಮ್ಮುತ್ತಿರುವ ಯುವ ಸಮೂಹ, ತಾವು ಪಡೆದ ವಿದ್ಯಾಭ್ಯಾಸಕ್ಕೆ ಸರಿ ಯಾದ ಉದ್ಯೋಗವ ಕಾಶ ಲಭಿಸದೆ, ತಮಗೆ ತೋಚಿದ ಉದ್ಯೋಗದಲ್ಲಿ ಸಂಪಾದನೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕೌಶಲ್ಯತೆಗಳ ಆಧಾರದಲ್ಲಿ ಶಿಕ್ಷಣದ ಬೋಧನಾ ಪ್ರಕ್ರಿಯೆ ನಡೆಯಬೇಕಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಪ್ರಾಸ್ತವಿಕವಾಗಿ ಮಾತನಾಡಿ,  ಭೂಮಂಡಲದಲ್ಲಿ ನಡೆಯುವ ಅದ್ಭುತ ಆವಿಷ್ಕಾರಗಳಲ್ಲಿ ಗ್ರಹಣ ಎಂಬ ವಿಸ್ಮಯವು ಒಂದು. ಗ್ರಹಣದ ವೈಜ್ಞಾನಿಕ ವಿಸ್ಮಯಗಳನ್ನು ಓದಿದ್ದೇವೆ, ಅದರೇ ಮೌಡ್ಯತೆಯ ಆಧಾರದಲ್ಲಿ ಬದುಕನ್ನು ಕಟ್ಟಿಕೊಂಡಿದ್ದೇವೆ. ವಿಜ್ಞಾನ ಕೊಟ್ಟ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತೇವೆ, ಅದರೆ ವೈಜ್ಞಾನಿಕ ಪ್ರಜ್ಞೆ ಏಕೆ ನಮ್ಮಲ್ಲಿ ಮೂಡಲಿಲ್ಲ ಎಂಬುದನ್ನು ಆತ್ಮ ವಿಮರ್ಶಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ, ಕನ್ನಡ ಉಪನ್ಯಾಸಕ ಬಿ.ಎನ್. ಪ್ರವೀಣ್ ಸೇರಿದಂತೆ ಮತ್ತಿತರರಿದ್ದರು. ಉಪನ್ಯಾಸಕಿ ಗಾಯತ್ರಿ ನಿರೂಪಿಸಿದರು.  ಗಾಯಕಿ ಸುಶೀಲಾ ಷಣ್ಮುಗಂ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *