
ಶಿವಮೊಗ್ಗ: ರಾಷ್ಟ್ರೀಯ ಗ್ರಾಮೀಣ ಸುರಕ್ಷಿತ ಮಿಷಿನ್, ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಇವರ ಕಾಳಜಿಯಿಂದ ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸುರಕ್ಷತಾ ಮಿಷಿನ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ (2024-25) ಮಾಡುತ್ತಿರುವ ವಿದ್ಯಾರ್ಥಿಗಳಿಗೆ 1 ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಲೋಕಸಭಾ ಕ್ಷೇತ್ರಾದ್ಯಂತ ಉಚಿತವಾಗಿ ಒಂದು ಲಕ್ಷ ಶಾಲಾ ಬ್ಯಾಗ್ ವಿತರಿಸಲಾಗಿದೆ.
ಪ್ರಸ್ತುತ 2025-26 ಸಾಲಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಾ ದ್ಯಂತ 1ರಿಂದ 4 ತರಗತಿ ಮಕ್ಕಳಿಗೆ 60ಸಾವಿರ ಉತ್ತಮ ಗುಣಮಟ್ಟದ ಸ್ವೆಟರ್ ವಿತರu ಯನ್ನು ಲೋಕ ಸಭಾ ಕ್ಷೇತ್ರದಲ್ಲಿ ಮೀಸಲಿಟ್ಟಿದ್ದು, ಇದರ ಅಂಗವಾಗಿ ಇಂದು ನಗರದ ಕಾಶಿ ಪುರ ಹಾಗೂ ಕಲ್ಲಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 220 ಮಕ್ಕಳಿಗೆ ಸ್ವೆಟರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ಬಿಜೆಪಿ ಪ್ರಮುಖರಾದ ಕುಮಾರ್ ಗಾಡಿ ಕೊಪ್ಪ,ರಂಗೇಶ್ ಎಚ್., ವಿಶ್ವನಾಥ್., ಆನಂದ್. ಶೇಖರ್ ನಾಯಕ್. ಮಂಜಣ್ಣ. ವೆಂಕಟೇಶ್. ರವಿ, ಶಾಲೆಯ ಸಿಬ್ಬಂದಿಗಳು ಮಕ್ಕಳು ಉಪಸ್ಥಿತರಿದ್ದರು.