
ಶಿವಮೊಗ್ಗ :- ಶಿವಮೊಗ್ಗ ನಗರದ ಹಿಂದೂ ಸಂಘಟನಾ ಮಹಾ ಮಂಡಳಿಯಿಂದ ಈ ಬಾರಿ 81ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶಿವಮೊಗ್ಗದ ಅತಿ ದೊಡ್ಡ ಗಣಪತಿ ಉತ್ಸವ ಇದಾಗಿದ್ದು, ಈ ಬಾರಿ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸ ಲಾಗುತ್ತಿದೆ. ಇದೀಗ ಸಮಿತಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 11 ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ
ಗಣಪತಿಯ ಪ್ರತಿಷ್ಠಾಪನೆಯು ಆಗಸ್ಟ್ ೨೭ರ ಬುಧವಾರ ಬೆಳಿಗ್ಗೆ 11.30ಕ್ಕೆ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ನೆರವೇರಲಿದೆ. ಗಣೇಶೋತ್ಸವದ ಪ್ರಯುಕ್ತ ಪ್ರತಿದಿನ ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.
ಆ. 28ರಂದು ಹೊಂಗಿರಣ ತಂಡದವರಿಂದ ‘ಹಗ್ಗದ ಕೊನೆ’ ಹಾಸ್ಯನಾಟಕ ಪ್ರದರ್ಶನ ಇರಲಿದೆ. ಆಗಸ್ಟ್ 29 ರಂದು ಚಂದ್ರಶೇಖರ ಭಟ್ ಮತ್ತು ತಂಡದಿಂದ ಸಪ್ತಸ್ವರ ಗಾನ ಕಾರ್ಯಕ್ರಮ ನಡೆಯಲಿದೆ. ಆ. 30 ರಂದು ದಾವಣಗೆರೆಯ ವಿದುಷಿ ಸಂಗೀತ ರಾಘವೇಂದ್ರ ಅವರಿಂದ ಸುಗಮ ಸಂಗೀತ ಹಾಗೂ ಆ. 31 ರಂದು ಕೆಳಕುಂಜಾಲು- ನೀಲಾವರದ ಯಕ್ಷಸಮೂಹ ಯಕ್ಷ ಕಲಾ ಪ್ರತಿಷ್ಠಾನದಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಸೆ. 1ರಂದು ಕಲಾರೋಹಣ ತಂಡದ ಹಾಸ್ಯ ನಾಟಕ ಅದ್ರೇಶಿ ಪರದೇಶಿಯಾದ ಮತ್ತು ಸೆ. 2 ರಂದು ಶಿವಮೊಗ್ಗದ ಶ್ರೀ ಸುಮುಖ ಕಲಾ ಕೇಂದ್ರ ಮಹಿಳಾ ಯಕ್ಷಗಾನ ಮಂಡಳಿಯಿಂದ ನರಕಾಸುರ ವಧೆ ಯಕ್ಷಗಾನ ಪ್ರಸಂಗ ನಡೆಯಲಿದೆ. ಸೆ. 3ರಂದು ಕೆ.ಜಿ. ಶಶಿಕುಮಾರ್ ಕಾರಂತ ಮತ್ತು ವೃಂದದಿಂದ ಗಾನಾಂಜಲಿಹಾಗೂ ಸೆ. 4ರಂದು ಕೇಡಲಸg ಶ್ರೀ ಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾನ ದಿಂದ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗ ಇರಲಿದೆ.
ಸೆ. ೫ರಂದು ವೀರ ಶಿವಮೂರ್ತಿ ಯವರ ಪುಣ್ಯ ಸ್ಮರಣೆ, ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಜರುಗಲಿವೆ. ಅಂತಿಮವಾಗಿ, ಸೆಪ್ಟೆಂಬರ್ 6ರ ಶನಿವಾರ ಬೆಳಗ್ಗೆ 9.30ಕ್ಕೆ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ರಾಜಬೀದಿ ಉತ್ಸವ ಮತ್ತು ವಿಸರ್ಜನೆ ನಡೆಯಲಿದೆ. ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಹಿಂದೂ ಸಂಘಟನಾ ಮಹಾ ಮಂಡಳಿಯ ಸಮಿತಿ ಮನವಿ ಮಾಡಿದೆ.