ಶಿವಮೊಗ್ಗ :- ಮಕ್ಕಳಿಗೆ ಸರಿಯಾದ ಪೋಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ತರ ಎಂದು ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾನಸಿಕ ವೈದ್ಯಕೀಯ ವಿಭಾಗ ಪ್ರೊಫೆಸರ್ ಹಾಗೂ ಮುಖ್ಯಸ್ಥ ಡಾ. ಹರೀಶ್ ಡೆಲಂತಬೆಟ್ಟು ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ವತಿಯಿಂದ ಏರ್ಪಡಿಸಿದ್ದ ೭೬ನೇ ರಾಷ್ಟ್ರೀಯ ಫೌಂಡ್ರಿ ದಿನಾಚರಣೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗ ದರ್ಶನ ನೀಡುವ ಮೂಲಕ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ನೈಟೆಕ್ ಫೆರೋಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್ನ ಹಿರಿಯ ಫೌಂಡ್ರಿಮೆನ್ ಮಹೇಶಪ್ಪ, ಅತ್ಯುತ್ತಮ ಕಾರ್ಮಿಕರಾಗಿ ಪ್ರಿಸಿಶನ್ ಕಾಸ್ಟಿಂಗ್ಸ್ ನ ಮೂಡ್ಲಿಗಿರಿ ಹಾಗೂ ಅತ್ಯುತ್ತಮ ಕುಶಲ ಕಾರ್ಮಿ ಕರಾಗಿ ಪ್ರಗತಿ ಸ್ಟೀಲ್ ಕಾಸ್ಟಿಂಗ್ಸ್ ರುದ್ರೇಶ್ ಅವರನ್ನು ಸನ್ಮಾನಿಸಲಾಯಿತು. ಶಟಲ್ ಬ್ಯಾಡ್ಮಿಂಟನ್ ಮತ್ತು ಕ್ವಿಜ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದಿ ಇನ್ಸ್ಟಿಟ್ಯೂಟ್ ಆಫ್ ಇಂಡಿ ಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ಖಜಾಂಚಿ ಅರುಣ್ ಎಂ.ಎಸ್. ಅವರು ರಾಷ್ಟ್ರೀಯ ಫೌಂಡ್ರಿ ದಿನದ ಕುರಿತು ಮಾಹಿತಿ ನೀಡಿದರು. ರಾಗ ರಂಜನಿ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು.
ಉದ್ಯಮಿಗಳಾದ ಶ್ರೀನಾಥ್ ಗಿರಿಮಾಜಿ, ದಾಮೋದರ್ ಬಾಳಿಗ, ಶಶಿಧರ್ ಭೂಪಾಳಂ, ಡಿ ಎಸ್ ಚಂದ್ರಶೇಖರ್, ಪರಮಶೇಖರ್, ಬೆನಕಪ್ಪ, ಸದಸ್ಯರಾದ ಇಲಂಗೋನ್ ನಂಜುಂಡೇಶ್ವರ, ಶಾಂತಿಕಿರಣ್, ಜಗದೀಶ್ವರಪ್ಪ, ನವೀನ್, ಚೇತನ್ ಮತ್ತಿತರರು ಪಾಲ್ಗೊಂಡಿದ್ದರು. ಚಾಪ್ಟರ್ ಅಧ್ಯಕ್ಷ ಎಂ.ವಿ. ರಾಘ ವೇಂದ್ರ ಸ್ವಾಗತಿಸಿ, ಚೇತನ ಸಿ.ಆರ್. ನಿರೂಪಿಸಿದರು. ಸಮೃದ್ಧಿ ಜೈನ್ ಮತ್ತು ಸನ್ನಿಧಿ ಜೈನ್ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಮಹಾವೀರ ಜೈನ್ ವಂದಿಸಿದರು.
