
ಶಿವಮೊಗ್ಗ :- ದುರ್ಗಿಗುಡಿ ಸರ್ಕಾರಿ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿಂದು ಸಂಸದ ಬಿ.ವೈ. ರಾಘವೇಂದ್ರ ಅವರು ಶಾಲಾ ಮಕ್ಕಳಿಗೆ ಸ್ವೇಟರ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ವರ್ಷದಲ್ಲಿ ಜಿಲ್ಲೆಯ ಸುಮಾರು 1ಲಕ್ಷ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಬ್ಯಾಗ್ ವಿತರಿಸಲಾಗಿತ್ತು. ಈ ಬಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜಿಲ್ಲೆಯಲ್ಲಿ ಚಳಿಯಿಂದ ರಕ್ಷಣೆ ನೀಡಿ, ಅವರು ನಿರಂತರವಾಗಿ ಶಾಲೆಗೆ ಬರಲಿ ಎನ್ನುವ ದೃಷ್ಟಿಯಿಂದ ಯಾವುದೇ ಖಾಯಿಲೆಗಳಿಗೆ ಬಲಿಯಾಗಬಾರದೆಂಬ ಆಶಯದಿಂದ ಸುಮಾರು 60 ಸಾವಿರ ಶಾಲಾ ಮಕ್ಕಳಿಗೆ ಸ್ವೇಟರ್ನ್ನು ವಿತರಿಸಲಾಗುತ್ತಿದೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸುರಕ್ಷತಾ ಮಿಷನ್ ಯೋಜನೆಯಡಿ ಮಕ್ಕಳಿಗಾಗಿ ಚಳಿಗಾಲದಲ್ಲಿ ಸ್ವೇಟರ್ ಕೊಡುವ ಯೋಜನೆ ಇಡೀ ದೇಶದಲ್ಲಿ ಪ್ರಾರಂಭವಾಗಿದೆ. ಅದನ್ನು ಶಿವಮೊಗ್ಗದಲ್ಲಿ ಸಂಸದರ ಹುಟ್ಟುಹಬ್ದದ ದಿನದಂದೇ ದೇಶದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಾಗುತ್ತಿದೆ. ನಗರದ ೮೭ಶಾಲೆಗಳಲ್ಲಿ ಇಂದು 1 ರಿಂದ 7ನೇ ತರಗತಿಯ ಮಕ್ಕಳಿಗೆ ಸ್ವೇಟರನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿಗೆ ಸಂಸದರಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ಸಂಸದರು ಮಕ್ಕಳಿಗೆ ಸಿಹಿ ತಿನ್ನಿಸಿದರು. ಕೃಷ್ಣಾಷ್ಠಮಿ ಆದ್ದರಿಂದ ಮಕ್ಕಳು ಕೃಷ್ಣ ಮತ್ತು ರಾಧೆಯರ ವೇಷವನ್ನು ಧರಿಸಿ, ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಾಸಕ ಡಾ| ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ನಾಗರಾಜ್, ಮೋಹನ್ರೆಡ್ಡಿ, ಮಾಲತೇಶ್, ಕುಮಾರ್, ಶಾಂತಾ ಸುರೇಂದ್ರ, ರಾಘವೇಂದ್ರ, ವೀರಭದ್ರಪ್ಪ ಪೂಜಾರಿ, ಕಿರಣ್ ಮತ್ತಿತರರಿದ್ದರು.