
ಶಿವಮೊಗ್ಗ :- ಜಿಲ್ಲಾ ಬಂಜರ ಸಂಘದ ವತಿಯಿಂದ ಸೆ. 1ರಂದು ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 9ಗಂಟೆಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜರ್ ಕನ್ವೇಷನ್‌ಹಾಲ್‌ನ ಆವರಣದಲ್ಲಿ ನೂತನವಾಗಿ ಕೃಷ್ಣಶಿಲೆಯಲ್ಲಿ ನಿರ್ಮಿಸಿರುವ ಶ್ರೀ ಮರಿಯಮ್ಮ ದೇವಿ, ಶ್ರೀ ಸಂತ ಸೇವಾಲಾಲ್, ಶ್ರೀ ಗಣಪತಿ ದೇವಸ್ಥಾನದ ಗೋಪುರ ಕಳಸ ಪ್ರತಿಷ್ಠಾಪನೆ, ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದರು.
ಬಂಜರ ಸಮುದಾಯದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಶೇ.೮೫ಕ್ಕೂ ಹೆಚ್ಚು ಅಂಕಗಳಿಸಿ, ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಆ.೧೫ ಕೊನೆಯ ದಿನವಾಗಿದ್ದು, ಜಿಲ್ಲೆಯ ಸಮುದಾಯದ ವಿದ್ಯಾರ್ಥಿಗಳು ಅರ್ಜಿಗಳನ್ನು ತಾಲ್ಲೂಕು ಸಂಘಗಳಿಗೂ ಸಹ ಸಲ್ಲಿಸಬಹುದಾಗಿದೆ ಎಂದರು.
ಈ ಸಮಾರಂಭಕ್ಕೆ ರಾಜಕೀಯ ಮುಖಂಡರು ಹಾಗೂ ಸಮಾಜದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸೊರಬ, ಸಾಗರ ತಾಲ್ಲೂಕು ಬಂಜರ ಸಂಘಗಳು, ಜಿಲ್ಲಾ ಬಂಜರ ಮಹಿಳಾ ಸಂಘ ಹಾಗೂ ಜಿಲ್ಲೆಯ ಮತ್ತಿತರರ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ. 9945464958, 9902142883 ಅಥವಾ 8660273941ರಲ್ಲಿ ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಈರಾನಾಯ್ಕ, ಕೆ. ಆನಂದ್, ನಾಗೇಶ್‌ನಾಯ್ಕ, ಕುಮಾರ ನಾಯ್ಕ, ನಾನ್ಯಾನಾಯ್ಕ, ಭೋಜನಾಯ್ಕ, ಆಯನೂರು ಶಿವಾನಂದ ನಾಯ್ಕ, ಶೇಖರನಾಯ್ಕ, ಸಮಿತಾಬಾಯಿ, ವಿಜಯಲಕ್ಷ್ಮೀ, ಪ್ರೇಮ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
