google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಕುವೆಂಪು ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರು ಬರಲಿರುವ ಪದವಿ ಉತ್ತರ ಪತ್ರಿಕೆಗಳ ಮಲ್ಯಮಾಪನ ಬಹಿಷ್ಕರಿಸಲು ಮುಂದಾಗಿದ್ದಾರೆ.

ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ನೀತಿಯ ವಿರುದ್ಧ ಸಿಡಿದೆದ್ದಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಕೊಡಲಾಗುತ್ತಿರುವ ಕಡಿಮೆ ಗೌರವ ಧನ, ಕಡಿಮೆ ಭತ್ಯೆ, ಪರೀಕ್ಷಾ ಕೊಠಡಿ ಸಂಭಾವನೆ ಮೊದಲಾದವುಗಳಲ್ಲಿ ವಿಶ್ವವಿದ್ಯಾಲಯ ಶೇ. 50ರಷ್ಟು ಕಡಿತಗೊಳಿಸಿದೆ. ಅಲ್ಲದೆ ಇವರಿಗೆ ವಿಶ್ವವಿದ್ಯಾಲಯದ ಸೆಮಿಸ್ಟರ್ ಪರೀಕ್ಷಾ ಸಂದರ್ಭಗಳಲ್ಲಿ ಬಾಹ್ಯ ಪರೀಕ್ಷಕರಾಗಿ ಸೇವೆಗೆ ತೆಗೆದುಕೊಳ್ಳದೆ ಇರುವುದು, ಜಗೃತ ದಳದಲ್ಲಿ ಸೇರಿಸಿಕೊಳ್ಳದೆ ಇರುವುದು ಇವರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಎನ್.ಇ.ಪಿ. ಪಠ್ಯಕ್ರಮದ ಎರಡು ತಾಸಿನ ಅವಧಿಯ ಪರೀಕ್ಷಾ ಕಾರ್ಯಕ್ಕೆ ವಿವಿಯು 225ರೂ. ಸಂಭಾವನೆ ನೀಡುತ್ತಿತ್ತು. ಆದರೆ ಈಗ ಎಸ್.ಇ.ಪಿ.ಪಠ್ಯಕ್ರಮದ ಮೂರು ತಾಸಿನ ಪರೀಕ್ಷಾ ಕಾರ್ಯಕ್ಕೆ ಕೇವಲ 150ರೂ. ಸಂಭಾವನೆ ನೀಡುತ್ತಿದೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಲ್ಯಮಾಪನ ಕೇಂದ್ರದಲ್ಲಿ ಮೊದಲು ದಿನಕ್ಕೆ 32 ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಒಂದು ದಿನಕ್ಕೆ 40 ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತಿದೆ. ಒಂದು ಉತ್ತರ ಪತ್ರಿಕೆ ಮಲ್ಯಮಾಪನಕ್ಕೆ ಕೊಡುತ್ತಿದ್ದ 22ರೂ.ಗಳನ್ನು 14 ರೂ.ಗಳಿಗೆ ಇಳಿಸಿದ್ದೂ ಆಕ್ರೋಶಕ್ಕೆ ಕಾರಣವಾಗಿದೆ. ಅದು ಮಲ್ಯಮಾಪಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಮ್ಯಾನ್ಯುಅಲ್ ಮಲ್ಯಮಾಪನ ಮಾಡುವಾಗಲೇ ಅನೇಕ ನ್ಯೂನ್ಯತೆಗಳು ಕಂಡುಬರುತ್ತಿದ್ದು ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದುದು ಸರ್ವವಿಧಿತ. ಈಗ ಕಳೆದ ಸೆಮಿಸ್ಟರ್‌ನಲ್ಲಿ ವಿವಿಯು ಡಿಜಿಟಲ್ ಮಲ್ಯಮಾಪನವನ್ನು ಆರಂಭಿಸಿದೆ. ಉಪನ್ಯಾಸಕರಿಗೆ ಮುಂಚಿತವಾಗಿಯೇ ಅದರ ಬಗ್ಗೆ ಸರಿಯಾದ ತರಬೇತಿ, ಮಾಹಿತಿ ಇಲ್ಲದ ಕಾರಣ ಆ ಮಲ್ಯಮಾನದಲ್ಲೂ ಸಾಕಷ್ಟು ಏರು ಪೇರುಗಳಾಗಿವೆ ಎಂದು ಅತಿಥಿ ಉಪನ್ಯಾಸಕರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *