
ಶಿವಮೊಗ್ಗ :- ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರಂಭಂ ಅಕ್ಷರಭ್ಯಾಸವನ್ನು ವಿಘ್ನ ನಿವಾರಕ ಗಣಪತಿಯನ್ನು ಪ್ರಾರ್ಥಿಸುತ್ತ ವಿದ್ಯೆಯ ಅಧಿದೇವತೆಯಾದ ಶಾರದಾಂಬೆಯನ್ನು ಸ್ಮರಿಸುತ್ತ ಈ ಪ್ರಾರಂಭಿಸಲಾಗಿತ್ತು.

ಶಾಲೆಯ ಪುಟಾಣಿ ಮಕ್ಕಳಿಗೆ ಅಕ್ಷರಭ್ಯಾಸದ ಮೊದಲ ದಿನವಾಗಿದ್ದು ಶಾರದಾ ದೇವಿಯ ಪೂಜೆಯ ಜೊತೆಗೆ ಅಕ್ಷರಾಭ್ಯಾಸವನ್ನು ನೆರವೇರಿಸಲಾಯಿತು. ನಿನ್ನೆಯ ದಿನ ಶೃಂಗೇರಿಗೆ ಶ್ರೀ ಕ್ಷೇತ್ರಕ್ಕೆ ತೆರಳಿ ಶ್ರೀ ಶಾರದಾ ದೇವಿ ಸನ್ನಿಧಾನದಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಸಂಕಲ್ಪ ಮಾಡಿ, ಆ ಪ್ರಸಾದವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿನಿಯೋಗ ಮಾಡಲಾಯಿತು .
ಜೊತೆಗೆ ಪೋಷಕರಿಗೆ ಶಾಲೆಯ ಪರಿಚಯಾತ್ಮಕ ಕಾರ್ಯಕ್ರಮವನ್ನು ನೀಡುವುದರ ಜೊತೆಗೆ ಅತ್ಯಂತ ಅರ್ಥಗರ್ಭಿತವಾಗಿ ವಿದ್ಯಾರಂಭಂ ಕಾರ್ಯಕ್ರಮವನ್ನು ನೆರವೇರಿಸ ಲಾಯಿತು. ಇದರ ಮೂಲ ಉದ್ದೇಶ ಜೈನ್ ಶಾಲೆಯ eನ, ಪ್ರತಿಭೆ, ಸಂಸ್ಕೃತಿಯು ಎಲ್ಲೆಡೆ ಬೆಳಗಲಿ ಎಂಬುದಾಗಿದೆ.
ಪ್ರಾಂಶುಪಾಲರಾದ ಶ್ರೀಮತಿ ಪ್ರಿಯದರ್ಶಿನಿ, ಸಿಒ.ಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯ ಕುಮಾರ್, ಪೋಷಕರು, ಶಿಕ್ಷಕರು, ಶಿಕ್ಷಕೇತರ ವರ್ಗದವರಿದ್ದರು.
