
ಶಿವಮೊಗ್ಗ :- ಇತ್ತೀಚೆಗೆ ಹೊಳೆಹೊನ್ನೂರು ಜಮೀನೊಂದರಲ್ಲಿ ಹೇಮಣ್ಣ ಎಂಬುವರನ್ನು ಬರ್ಬರವಾಗಿ ಹತ್ಯೆ ಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಧಿಸಲಾಗಿದೆ.
ಹೇಮಣ್ಣ ಕೊಲೆ ಪ್ರಕರಣದ ಆರೋಪಿ ಮಂಜು ಅಲಿಯಾಸ್ ಚಳಿ ಹೊಳೆ ಹೊನ್ನೂರು ವ್ಯಾಪ್ತಿಯಲ್ಲಿ ಇರುವಿಕೆಯ ವಿಷಯ ತಿಳಿದ ಹೊಳೆಹೊನ್ನೂರು ಠಾಣೆಯ ಇನ್ಸ್ಪೆಕ್ಟರ್ ಲಕ್ಷ್ಮೀಪತಿ ಮತ್ತು ತಂಡದವರು ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಪೊಲೀಸ್ ಸಿಬ್ಬಂಧಿಗಳ ಮೇಲೆಯೇ ತಿರುಗಿಬಿದ್ದಾನೆ. ಈ ಸಂದರ್ಭದಲ್ಲಿ ಪಿಸಿ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ತಪ್ಪಿಸಿಕೊಳ್ಳಲು ಹಾಗೂ ಹಲ್ಲೆಗೆ ಮುಂದಾದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ನಂತರ ಬಂಧಿಸಿದ್ದಾರೆ.

ಆರೋಪಿ ಮಂಜನನ್ನು ಬಂಧಿಸಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಹಲ್ಲೆಗೊಳಗಾದ ಪಿಸಿ ಪ್ರಕಾಶ್ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂದು ಪಲೀಸರು ಬಲೆ ಬೀಸಿದ್ದಾರೆ.
