google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಪರ್ಲ್ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಮತ್ತು ವಿದ್ಯಾ ಅವರ ನಿರ್ಮಾಣದೊಂದಿಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ಹಾಗೂ ರಾಮಚಾರಿ ಧಾರಾವಾಹಿ ಖ್ಯಾತಿಯ ಮನಗುಡ್ಡೆಮನೆ ಅಭಿನಯದ ಕುಲದಲ್ಲಿ ಕೀಳಾವುದೋ ಹೆಸರಿನ ಚಿತ್ರ ಮೇ 23 ರಂದು ರಾಜದ್ಯಂತ ಬಿಡುಗಡೆ ಆಗುತ್ತಿದೆ.

ಬಿಡುಗಡೆಯ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿರುವ ಚಿತ್ರ ತಂಡದ ಪರವಾಗಿ ಇಂದು ನಾಯಕ ನಟ ಮಡೇನೂರು ಮನು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿತ್ರದ ವಿಶೇಷತೆ ಕುರಿತು ಮಾಹಿತಿ ಹಂಚಿಕೊಂಡರು. ಚಿತ್ರದ ಶೀರ್ಷಿಕೆಯೇ ಇಲ್ಲಿ ಹೈಲೆಟ್. ಯಾಕೆಂದರೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿನ ಕುಲದಲ್ಲಿ ಕೀಳಾವುದೋ ಹಾಡು ಮನೆ ಮಾತು. ಆ ಹಾಡಿನ ಮೊದಲ ಪದವೇ ಈ ಚಿತ್ರದ ಶೀರ್ಷಿಕೆ. ಅಣ್ಣಾವ್ರ ಕುಟುಂಬದಿಂದಲೇ ನಮಗೆ ಈ ಶೀರ್ಷಿಕೆ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.

ಇದು ದೊಡ್ಡ ತಾರಾಗಣವೇ ಇರುವ ಚಿತ್ರ. ಯೋಗರಾಜ್ ಭಟ್, ತಬಲ ನಾಣಿ, ಕರಿಸುಬ್ಬು, ಸೋನಾಲ್ ಮೊಂತೆರೋ, ಶರತ್ ಲೋಹಿತಾಶ್ವ, ಹರಿಶ್ ರಾಜ್ , ನಾಗೇಂದ್ರ ಅರಸ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿದ್ದಾರೆ. ಪ್ರೇಕ್ಷಕರಿಗೆ ಇನ್ನೇನ್ನೋ ಸಂದೇಶ ಹೇಳಬೇಕು ಎನ್ನುವುದಕ್ಕಿಂತ ಮನರಂಜನೆ ನೀಡಬೇಕೆನ್ನುವ ಕಾರಣಕ್ಕೆ ಕಾಮಿಡಿ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ನಗಿಸುವುದರ ಮೂಲಕ ಜನಕ್ಕೆ ಒಂದು ಮಾಸ್ ಎಲಿಮೆಂಟ್ ಮೇಸೆಜ್ ಕೂಡ ಚಿತ್ರದಲ್ಲಿದೆ, ಆ ಮೇಸೆಜ್ ಏನು ಎನ್ನುವುದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ ಎಂದರು.

ಇದೇ ವೇಳೆ ಅವರು, ಚಿತ್ರದಲ್ಲಿ ಒಂದು ಹಾಡು ಸೋನು ನಿಗಮ್ ಹಾಡಿದ್ದನ್ನು , ತೆಗೆದುಹಾಕಿದ್ದನ್ನು ಕೂಡ ಹೇಳಿಕೊಂಡರು. ಸೋನು ನಿಗಮ್ ಅವರು ಉತ್ತಮ ಗಾಯಕರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತಿನಿಂದ ನಮಗೆ ತುಂಬಾನೇ ಬೇಸರವಾಗಿದೆ. ಅದೇ ಕಾರಣಕ್ಕೆ ನಮ್ಮ ಚಿತ್ರದಲ್ಲಿ ಅವರು ಹಾಡಿದ್ದ ಹಾಡನ್ನು ತೆಗೆದು ಹಾಕಿದ್ದೇವೆ. ಆ ಹಾಡನ್ನು ಈಗ ಚೇತನ್ ಅವರಿಂದ ಹಾಡಿಸಲಾಗಿದೆ ಎಂದರು.

ಶ್ರೀನಿಧಿ ಸಂಸ್ಥೆಯ ಮಾಲತೇಶ್ ಮಾತನಾಡಿ, ಈ ಚಿತ್ರದ ಕುರಿತು ಮಂಗಳವಾರ ಶಿವಮೊಗ್ಗ ನಗರದ ಹಲವಡೆ ಪ್ರಚಾರ ನಡೆಸಲಾಗಿದೆ. ವಿಶೇಷವಾಗಿ ಜೆಎನ್‌ಎನ್ ಸಿಸಿ, ಡಿವಿಎಸ್ ಹಾಗೂ ಎಟಿಎನ್ ಸಿಸಿ ಕಾಲೇಜಿನಲ್ಲಿ ಪ್ರಮೋಷನ್ ಪ್ರಚಾರ ನಡೆಸಲಾಯಿತು ಎಂದರು. ಗೋಷ್ಠಿಯಲ್ಲಿ ಅವರೊಂದಿಗೆ ವಿನೋದ್ ಇದ್ದರು.

Leave a Reply

Your email address will not be published. Required fields are marked *